ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೆಸಿಎಸ್ಆರ್ ಕಾಯ್ದೆ; ಎಚ್ಕೆಇ ಅನುಕೂಲಸಿಂಧು ನೀತಿ

Rashmi Kasaragodu
Updated On : 31 Mar 2013, 1:24 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.30
ಹೈ-ಕ ಪ್ರಾಂತದ ಪ್ರತಿಷ್ಠಿತ ಎಚ್ಕೆಇ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ನಾಗರಿಕ ಸೇವೆಗಳ ನಿಯಮ (ಕೆಸಿಎಸ್ಆರ್) ಅನುಷ್ಠಾನ ಅನುಕೂಲ ಸಿಂಧು ಎಂಬಂತೆ ಸಾಗಿದೆ.
ಇದರಿಂದಾಗಿ ಕೆಸಿಎಸ್ಆರ್ ನಿಯಮಗಳನ್ವಯ ದೊರಕಬೇಕಾದ ಹಲವಾರು ಸೌಲಭ್ಯಗಳಿಂದ ಸಂಸ್ಥೆಯ ಸಾವಿರಾರು ನೌಕರರು ವಂಚಿತರಾಗಿದ್ದಾರೆ. ಈ ಸಂಗತಿಯನ್ನು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರೇ ಹೇಳುತ್ತಿದ್ದಾರೆ. ಈ ಬೆಳವಣಿಗೆ ಶಿಕ್ಷಣ ಸಂಸ್ಥೆಯ ಆಡಳಿತದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದರತ್ತ ಬೆರಳು ತೋರಿಸಿದೆ. ಸಂಸ್ಥೆಯ ಘನತೆಗೇ ಕಪ್ಪು ಚುಕ್ಕೆಯಂತಾಗಿದೆ.  ಹುದ್ದೆಗಳಲ್ಲಿರುವ ಸಿಬ್ಬಂದಿ ನಿಧನ ಹೊಂದಿದರೆ ಅಂಥವರ ಮಕ್ಕಳಿಗೆ ಅವರ ವಿದ್ಯಾರ್ಹತೆ ಆಧಾರದ ವರ್ಷದೊಳಗೇ ಅನುಕಂಪದ ನೌಕರಿ ನೀಡಬೇಕು. ಆದರೆ 2001ರಿಂದಲೂ ಈ ನಿಯಮ ಇಲ್ಲಿ ಜಾರಿಗೊಂಡಿಲ್ಲ.   'ಕನ್ನಡಪ್ರಭ'ದೊಂದಿಗೆ ಮಾತನಾಡಿದ ರಾಂಪೂರೆ ವೈದ್ಯ ವಿದ್ಯಾಲಯ ಬೋಧಕೇತರ ಸಿಬ್ಬಂದಿ ಸಂಘದ ಅಧ್ಯಕ್ಷ ಬೇದೇನಗೌಡ ಪಾಟೀಲ್, ಅನುಕಂಪದ ನೌಕರಿ ವಂಚಿತರಾಗಿರುವ ನಾವು ನಮ್ಮ ಸಂಸಾರದ ಸದಸ್ಯರಿಗೆ ಅದೇನು ಹೇಳಬೇಕು ತೋಚದಂತಾಗಿದೆ ಎಂದರು.
2001ರ ಪೂರ್ವ ಎಲ್ಲವೂ ಸರಿಯಾಗಿತ್ತು. ಹಿಂದೆಲ್ಲಾ ನೌಕರಿಗಳನ್ನು ಈ ನೀತಿಯಡಿಯಲ್ಲಿ ನೀಡಲಾಗಿದೆ. ಆದರೆ ದಶಕದಿಂದ ಈಚೆಗೆ ಈ ನೀತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ ಎಂದು ಅವರು ವಿಷಾದಿಸಿದರು.
ಗಳಿಕೆ ರಜೆ ನಗದೀಕರಣವೂ ಇಲ್ಲ: 30 ರಜೆಗಳನ್ನು ದ್ವೈವಾರ್ಷಿಕ ಒಪ್ಪಿಸಿ ಅದರ ಪ್ರತಿಯಾಗಿ ಹಣ ಪಡೆಯುವ ಗಳಿಕೆ ರಜೆ ನದೀಕರಣ ಸೌಕರ್ಯವೂ ಇಲ್ಲಿನ ಸಿಬ್ಬಂದಿ ಪಾಲಿಗೆ ಇಲ್ಲದಂತಾಗಿದೆ. ಸಂಸ್ಥೆ ಈ ನಿಯಮದಡಿಯಲ್ಲಿ ಯಾರಿಗೂ ರಜೆ ನಗದೀಕರಣ ಸೌಕರ್ಯ ನೀಡಿಲ್ಲ.
ಇದ್ಯಾವ ನೀತಿ?: ಹಣಕಾಸಿನ ಲೆಕ್ಕ ಬಂದರೆ ಹೊಸ ನೀತಿ ಹೈಕಶಿ ಸಂಸ್ಥೆ ಅಳವಡಿಸಿಕೊಂಡಂತಿದೆ ಎಂದು ನೌಕರರು ಸಂಸ್ಥೆ ನಿಲುವನ್ನು ಖಂಡಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement