ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಥೋತ್ಸವದೊಂದಿಗೆ ಶ್ರೀಶೈಲಕ್ಕೆ ಪಾದಯಾತ್ರೆ

Rashmi Kasaragodu
Updated On : 31 Mar 2013, 1:22 am

ಮುದಗಲ್: ಕಲಿಯುಗದಲ್ಲಿ ಕೂಡ ದೇವರಿದ್ದಾನೆ ಎನ್ನುವ ಭಾವನೆ, ಭಕ್ತಿಯಿಂದ ಜಮಖಂಡಿ ತಾಲೂಕಿನ ಲಿಂಗನೂರಿನ ಕೆಲವು ಗ್ರಾಮಸ್ಥರು ಗ್ರಾಮದಿಂದಲೇ ರಥವನ್ನು ಎಳೆದುಕೊಂಡು ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.
ಜಮಖಂಡಿ ತಾಲೂಕಿನ ಲಿಂಗನೂರ ಗ್ರಾಮದ ಕೆಲವು ಭಕ್ತರು ಪಟ್ಟಣದ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸಾದ, ವೈದ್ಯಕೀಯ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದ ಬಳಿಕ ಪಟ್ಟಣದಿಂದಲೇ ಮತ್ತೆ ತಮ್ಮ ರಥೋತ್ಸವದ ಮೂಲಕ ಪಾದಯಾತ್ರೆಯನ್ನು ಬೆಳೆಸಿದರು.
 ಸುಮಾರು 200 ಜನರನ್ನು ಹೊಂದಿದ ತಂಡ ಮಹಿಳೆಯರನ್ನು ಒಳಗೊಂಡು, ಸುಕ್ಷೇತ್ರ ಶ್ರೀಶೈಲ ಮುಟ್ಟಲು ಸುಮಾರು 25 ದಿನಗಳ ಕಾಲಾವಕಾಶ ಬೇಕು ಎಂದು ತಂಡದ ಲಿಂಗಪ್ಪ, ಕಾಡಯ್ಯ, ಘಂಟಿಮಠ, ಮಹಾಂತೇಶ, ರಮೇಶ ಕಡಪಟ್ಟಿ, ಕರಿಯಪ್ಪ ಕಡಪಟ್ಟಿ ತಿಳಿಸಿದರು. ರಥವನ್ನು ಪಾದಯಾತ್ರೆ ಮೂಲಕ ತೆರಳುತ್ತಿರುವುದನ್ನು ಕಂಡ ಪಟ್ಟಣದ ಜನತೆ ಭಕ್ತರ ಸಾಹಸವನ್ನು ಕೊಂಡಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement