ವೃತ್ತಿ ಮಾರ್ಗದರ್ಶನ ಸಲಹಾ ಕೇಂದ್ರ ಸ್ಥಾಪನೆ
ಗುಲ್ಬರ್ಗ: ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಕುಮಸಿಯಲ್ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರದ ಉದ್ಘಾಟನಾ ಸಮಾರಂಭ ಜರುಗಿತು.
ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಆರ್. ವೆಂಕಟರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ವೃತ್ತಿ ಮಾರ್ಗದರ್ಶನ ಹಾಗೂ ಪರೀಕ್ಷೆಯ ಭಯ ನಿವಾರಣೆಯ ಕುರಿತು ಹೇಳಿದರು. ಶಾಲೆಯ ಮುಖ್ಯ ಗುರು ಸತ್ಯನಾರಾಯಣ ಮೂರ್ತಿ ಪಟವಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಮುಂದಿನ ದಿನಗಳಲ್ಲಿ ಯಾವ ಯಾವ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡರೆ ಏನೇನು ಲಾಭವಾಗುತ್ತದೆ ಎಂಬ ಬಗ್ಗೆ ತಿಳಿಸಿದರು. ಸಹ ಶಿಕ್ಷಕಿ ಶಾಹೀನ್ ಅಖ್ತರ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ಕಿಣಗಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಹೂಗಾರ ಸ್ವಾಗತಿಸಿದರು. ಅನುಧಾರ ವಂದಿಸಿದರು.