ಹುಚ್ಚು ನರಿ ಕಚ್ಚಿ ಗಾಯ
ದೇವದುರ್ಗ: ತಾಲೂಕಿನ ಮಸೀದಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹುಚ್ಚು ನರಿ ಕಡಿತದಿಂದ ಮೂವರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಮಾಳಪ್ಪ (45), ಕೃಷ್ಣಾಬಾಯಿ (40) ಮತ್ತು ಗಂಗಪ್ಪ (25) ಎಂದು ಗುರುತಿಸಲಾಗಿದೆ. ಇವರು ಗ್ರಾಮದಲ್ಲಿ ರಾತ್ರಿ ವೇಳೆ ತಮ್ಮ ಮನೆ ಮುಂದೆ ಮಲಗಿದ್ದ ವೇಳೆ ದಾಳಿ ಮಾಡಿರುವ ಹುಚ್ಚು ನರಿಯು ಕಚ್ಚಿ ಗಾಯಗೊಳಿಸಿದ್ದು ಅವರನ್ನು ರಾಯಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಚ್ಚು ನರಿಯು ಅದೇ ರೀತಿ ಗ್ರಾಮದಲ್ಲಿ 9 ಜಾನುವಾರುಗಳನ್ನೂ ಕಚ್ಚಿ ಗಾಯಗೊಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗಾಯಾಳುಗಳು ಜೋರಾಗಿ ಕಿರುಚಿದ್ದರಿಂದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ನರಿಯು ಅಲ್ಲಿಂದ ಓಡಿ ಹೋಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.