ಸ್ವಾತಂತ್ರ್ಯ ಹೋರಾಟಗಾರ ಆರ್. ಕಿಶನ್ರಾವ್ ಜೋಶಿ
ಸಿಂಧನೂರು: ಸ್ವಾತಂತ್ರ್ಯ ಹೋರಾಟಗಾರ ಆರ್. ಕಿಶನರಾವ್ ಜೋಶಿ (81) ಬುಧವಾರ ರಾತ್ರಿ ಸಿಂಧನೂರಿನಲ್ಲಿ ನಿಧನರಾದರು. ಬಾಲ್ಯದಿಂದಲೇ ದೇಶಪ್ರೇಮ ಹೊಂದಿದ್ದ ಇವರು ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ. ವೃತ್ತಿಯಲ್ಲಿ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನೀಯರರಾಗಿ ಬಳ್ಳಾರಿ, ಆಲಮಟ್ಟಿ, ಕೊಪ್ಪಳದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮೃತರಿಗೆ ಪತ್ನಿ ಪ್ರಮೀಳಾಬಾಯಿ ಹಾಗೂ ಮಕ್ಕಳಾದ ಆನಂದ, ರವಿ, ಪ್ರಾಣೇಶ, ಜಯಶ್ರೀ, ವೀಣಾ ಮತ್ತು ಮೊಮ್ಮಕ್ಕಳು ಇದ್ದಾರೆ. ನಿಧನಕ್ಕೆ ಡಾ.ಆರ್.ವಿ. ಜೋಷಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಗೋಪಾಲರಾವ್ ದೇಸಾಯಿ, ಡಾ. ರವೀಂದ್ರ ಜೀ, ಗಣೇಶ ಜೀ, ಬಿಜೆಪಿ ತಾಲೂಕಾಧ್ಯಕ್ಷ ಅಮರೇಗೌಡ ಮತ್ತಿತರರು ಸಂತಾಪ ಸೂಚಿಸಿದ್ದಾರೆ.