ಜೇಷ್ಠತಾ ಪಟ್ಟಿ ಪ್ರಕಟ
ರಾಯಚೂರು: ಗುಲ್ಬರ್ಗ ವಿಭಾಗ ಮಟ್ಟದ ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರ ತತ್ಸಮಾನ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ 2012ರ ಡಿ. 31ರಲ್ಲಿದ್ದಂತೆ ಸಂಬಂಧಿಸಿದ ಉಪನಿರ್ದೇಶಕರ ಮೂಲಕ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಶಿಕ್ಷಕರ ಸೇವಾ ವಿವರದ ಮಾಹಿತಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಮೇ 8ರೊಳಗೆ ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರು,(ಆಡಳಿತ) ಇವರಿಗೆ ಸಲ್ಲಿಸಲು ಗುಲ್ಬರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಎಚ್. ಡೋಣೂರು ತಿಳಿಸಿದ್ದಾರೆ.