ನ್ಯಾಯಯುತ ಮತದಾನಕ್ಕೆ ನಿರ್ಧಾರ
ಲಿಂಗಸ್ಗೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನ್ಯಾಯಯುತ ಮತದಾನ ಮಾಡಲು ಕುಪ್ಪಿಗುಡ್ಡ ಗ್ರಾಮದ ದಲಿತ ಕಾಲೋನಿ ಜನತೆ ನಿರ್ಧರಿಸಿ ಸಹಾಯಕ ಆಯುಕ್ತರ ಕಚೇರಿ ಶಿರಸ್ತೇದಾರ ಜಾಫರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ವಿಧಾನಸಭೆ ಚುನಾವಣೆ ಪ್ರಯುಕ್ತ ಸರ್ಜಾಪುರ, ಕುಪ್ಪಿಗುಡ್ಡ ಮತ್ತು ಅಮರಾವತಿ ಗ್ರಾಮದ ಕೆಲವರು ಕುಪ್ಪಿಗುಡ್ಡ ಗ್ರಾಮದ ದಲಿತ ಕಾಲೋನಿ ಜನರನ್ನು ವಿಚಾರಿಸದೆ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು. ಪ್ರತಿಯೊಬ್ಬರೂ ಮತದಾನ ಮಾಡುವ ಹಕ್ಕು ಹೊಂದಿದ ಪ್ರಯುಕ್ತ ಮೇ 5ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ನಾವುಗಳು ನಿರ್ಧರಿಸಿದ್ದು, ನಮ್ಮ ಹಕ್ಕು ಚಲಾಯಿಸಲು ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಗ್ರಾಮದ ಸಾಬಣ್ಣ, ಶಿವಪ್ಪ, ಹುಲುಗಪ್ಪ, ನೀಲಪ್ಪ, ಕುಪ್ಪಣ್ಣ, ಅಮರೇಶ, ರಾಜಪ್ಪ, ದುರುಗಪ್ಪ, ಕುಬೇರಪ್ಪ ಸೇರಿದಂತೆ ಇದ್ದರು.