ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಲ್ಲರ ಚಿತ್ತ ಎಣಿಕೆಯತ್ತ...

Lingaraj Badiger
Updated On : 7 May 2013, 10:53 am

ಕ.ಪ್ರ. ವಾರ್ತೆ, ರಾಯಚೂರು, ಮೇ 6
ಜಿಲ್ಲೆಯ ಎಲ್ಲ 7 ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಶೇ.64.83 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಪೂರ್ಣಗೊಳ್ಳುತ್ತಿದ್ದಂತೆಯೇ ಸದ್ಯ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಮತದಾರರು ಮತ ಎಣಿಕೆ ದಿನಕ್ಕಾಗಿ ಕಣ್ಬಿಟ್ಟು ಕಾದಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ ನಡೆದ ಮತದಾನದಲ್ಲಿ ಅತೀ ಕಡಿಮೆ ಮತದಾನ ರಾಯಚೂರು ನಗರ ಕ್ಷೇತ್ರದಲ್ಲಿ ಹಾಗೂ ಅತೀ ಹೆಚ್ಚು ಮತದಾನ ಜಿಲ್ಲೆಯ ಸಿಂಧನೂರು ಕ್ಷೇತ್ರದಲ್ಲಿ ನಡೆದಿದ್ದು, ಕಳೆದ ಸಾರಿಗೆ ಹೋಲಿಕೆ ಮಾಡಿದರೆ ಜಿಲ್ಲೆಯ ಒಟ್ಟು ಮತದಾನದ ಪ್ರಮಾಣ ಶೇ.11ರಷ್ಟು ಹೆಚ್ಚಳ ಕಂಡಿದ್ದರೂ, ರಾಯಚೂರು ನಗರ ಕ್ಷೇತ್ರದಲ್ಲಿ ಮತದಾರರು ಮತದಾನಕ್ಕೆ ಉದಾಸೀನ ತೋರುತ್ತಿರುವುದು ಮತ್ತೆ ಮುಂದುವರಿದಿದೆ. ಮತದಾನದ ಕ್ಷೇತ್ರವಾರು ವಿವರ ಇಂತಿದೆ.
ಮತ ಎಣಿಕೆಗೆ ಸಿದ್ಧತೆ: ಜಿಲ್ಲೆಯ ಎಲ್ಲ 7 ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಮತಗಳ ಎಣಿಕೆ ಕಾರ್ಯವು ನಗರದ ಎಸ್ಆರ್ಪಿಎಸ್ ಕಾಲೇಜಿನಲ್ಲಿ ಮೇ 8ರಂದು ನಡೆಯಲಿದೆ. ಜಿಲ್ಲಾಡಳಿತವು ಈಗಾಗಲೇ ಮತಗಳ ಎಣಿಕೆಗೆ ಅಗತ್ಯ ಕ್ರಮ ಕೈಗೊಂಡಿದೆ.
ಮತದಾನದ ನಂತರ ಜಿಲ್ಲೆಯ ಎಲ್ಲೆಡೆಯಿಂದ ಮತ ಯಂತ್ರಗಳನ್ನು ನಗರದ ಎಸ್ಆರ್ಪಿಎಸ್ ಕಾಲೇಜಿನಲ್ಲಿ ಸಂಗ್ರಹಿಸಿಡಲಾಗಿದೆ. ಮತಯಂತ್ರಗಳಿರುವ ಕೊಠಡಿಗೆ ಕೇಂದ್ರದ ಅರೆ ಸೇನಾ ಪಡೆಯ ಸಿಬ್ಬಂದಿಯ ಬಿಗಿ ಭದ್ರತೆ ಒದಗಿಸಿದ್ದು, ಮತದಾನ ಮುಗಿಯುತ್ತಿದ್ದಂತೆಯೇ ಜಿಲ್ಲೆಯ ಎಲ್ಲ 86 ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ಮತದಾರರಲ್ಲಿ ಫಲಿತಾಂಶದ ಬಗ್ಗೆಯೇ ಕುತೂಹಲ ಹೆಚ್ಚಿದೆ. ಮತ ಎಣಿಕೆ ದಿನಕ್ಕಾಗಿ ಎಲ್ಲರೂ ಕಾದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement