ತರಬೇತಿ ಬೀಳ್ಕೊಡುಗೆ ಸಮಾರಂಭ
ರಾಯಚೂರು: ನಗರದ ವೀಟಾ ಇಂಗ್ಲಿಷ್ ತರಬೇತಿ ಸಂಸ್ಥೆಯಲ್ಲಿ ಸಮರ್ಥ ಕೆರಿಯರ್ ಅಕಾಡೆಮಿ ವತಿಯಿಂದ ತರಬೇತಿ ಪಡೆದವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ಕೆಇಎಸ್ ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಹಳ್ಳೂರು, ಸಮರ್ಥ ಕೆರಿಯರ್ ಅಕಾಡೆಮಿಯ ಮುಖ್ಯಸ್ಥೆ ವೀಣಾ ಎಚ್.ಕೆ, ತರಬೇತುದಾರರಾದ ಅನಿಲ್ ಅಪ್ರಾಳ್, ಸಂಪತಕುಮಾರ್, ಗುರುರಾಜ್ ಘೋಡಗೇರಿ, ರಾಕೇಶ್ ಇದ್ದರು. ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗ ಪಾಲ್ಗೊಂಡಿದ್ದರು.