ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತದಾರರ ನಿರ್ಣಯಕ್ಕೆ ಬದ್ಧ: ಮುರಾರಿ

Lingaraj Badiger
Updated On : 7 May 2013, 10:54 am

ಕ.ಪ್ರ. ವಾರ್ತೆ, ಲಿಂಗಸ್ಗೂರು, ಮೇ 6
ವಿಧಾನಸಭೆ ಚುನಾವಣೆ ಭಾನುವಾರ ಮೇ 6ರಂದು ಶಾಂತಿಯುತವಾಗಿ ಜರುಗಿದೆ. ಕ್ಷೇತ್ರದ ಮತದಾರರ ನಿರ್ಣಯಕ್ಕೆ ತಾವು ಬದ್ಧರಾಗಿದ್ದು, ಚುನಾವಣೆಯಲ್ಲಿ ಸೋಲು- ಗೆಲವನ್ನು ಸಮಾನವಾಗಿ ಸ್ವೀಕರಿಸುವುದಾಗಿ ಕೆಜೆಪಿ ಅಭ್ಯರ್ಥಿ ಹೆಚ್.ಬಿ.ಮುರಾರಿ ಸ್ಪಷ್ಟಪಡಿಸಿದರು.
ಸ್ಥಳೀಯ ಕೆಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರಿಗೆ ಹಣ ನೀಡಿ ಮತ ಖರೀದಿಸಿ ಗೆಲ್ಲುವ ವಿಶ್ವಾಸ ಹೊಂದಿರಬಹುದು. ಆದರೆ ಅದು ಅಸಾಧ್ಯದ ಮಾತಾಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಕ್ಷೇತ್ರದ ಹಿರಿಯ ನಾಯಕರ ಬೆಂಬಲದಿಂದ ತಮ್ಮ ಗೆಲವು ಖಚಿತವಾಗಿದ್ದು, ಚುನಾವಣೆಯಲ್ಲಿ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರು ತಮಗೆ ನೀಡಿದ ಸಹಾಯ, ಸಹಕಾರಕ್ಕೆ ಅಭಿನಂದನೆ. ಚುನಾವಣೆಯಲ್ಲಿ ಸೋಲು- ಗೆಲವು ಸಾಮಾನ್ಯವಾಗಿದ್ದು, ತಮ್ಮನ್ನು ನಂಬಿದ ಜನತೆಗೆ ದ್ರೋಹ ಬಗೆಯದೆ ಸಾಮಾನ್ಯ ಸೇವಕನಾಗಿ ಕೆಲಸ ಮಾಡುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಮೇಶ ಶಾಸ್ತ್ರಿ, ಶರಣಗೌಡ ಬಸಾಪುರ, ಶರಣಯ್ಯ ಗೊರೇಬಾಳ, ದುಂಡನಗೌಡ ಬ್ಯಾಲಿಹಾಳ, ವೀರಭದ್ರಯ್ಯಸ್ವಾಮಿ, ಜಗದೀಶಯ್ಯ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement