ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲಿಂಗಸ್ಗೂರಲ್ಲಿ ಶೇ. 64.90, ಮಸ್ಕಿ ಶೇ.63 ಮತದಾನ

Lingaraj Badiger
Updated On : 7 May 2013, 10:53 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 6
ರಾಜ್ಯದ 14ನೇ ವಿಧಾನಸಭೆ ರಚನೆಗೆ ಮೇ 5ರಂದು ನಡೆದ ಚುನಾವಣೆ ಯಶಸ್ವಿಯಾಗಿದೆ. ಲಿಂಗಸ್ಗೂರು ಕ್ಷೇತ್ರದ ಚುನಾವಣೆಯಲ್ಲಿ ಶೇ. 64.90ರಷ್ಟು, ಮಸ್ಕಿ ಕ್ಷೇತ್ರದಲ್ಲಿ ಶೇ.63.85ರಷ್ಟು ಮತದಾನವಾಗಿದೆ.
ಲಿಂಗಸ್ಗೂರು ಕ್ಷೇತ್ರದ ಒಟ್ಟು 1,97,809 ಮತದಾರರಲ್ಲಿ 1,28,370 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದ ಹೆಗ್ಗಾಪುರ ತಾಂಡಾದಲ್ಲಿ ಶೇ.83.85ರಷ್ಟು ಗರಿಷ್ಠ ಮತದಾನವಾಗಿದೆ. ಮುದಗಲ್ ಮತಗಟ್ಟೆ ಸಂಖ್ಯೆ 190ರಲ್ಲಿ ಶೇ.30ರಷ್ಟು ಕನಿಷ್ಠ ಮತದಾನವಾಗಿದೆ.
ಅದರಂತೆ ಮಸ್ಕಿ ವಿಧಾನಸಭೆ ಕ್ಷೇತ್ರದ 1,64,885 ಮತದಾರರಲ್ಲಿ 1,05,279 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದ ಮೇರನಾಳ ಗ್ರಾಮದಲ್ಲಿ ಶೇ. 83.17 ಗರಿಷ್ಠ ಮತದಾನವಾಗಿದ್ದು, ಕುಪ್ಪಿಗುಡ್ಡ ಗ್ರಾಮದಲ್ಲಿ ಶೇ. 0.81ರಷ್ಟು ಕನಿಷ್ಠ ಮತದಾನವಾಗಿರುತ್ತದೆ.
ಮತದಾನ ಶಾಂತಿಯುತವಾಗಿ ಯಶಸ್ವಿಯಾಗಿದ್ದು, ಲಿಂಗಸ್ಗೂರು ಕ್ಷೇತ್ರದಲ್ಲಿ ಜೆಡಿಎಸ್ನಿಂದ ಮಾನಪ್ಪ ವಜ್ಜಲ್, ಡಿ.ಎಸ್. ಹೂಲಗೇರಿ- ಕಾಂಗ್ರೆಸ್, ಟಿ.ಆರ್.ನಾಯಕ- ಬಿಜೆಪಿ, ಎಚ್.ಬಿ. ಮುರಾರಿ- ಕೆಜೆಪಿ, ಸಿದ್ದು ಬಂಡಿ- ಬಿಎಸ್ಸಾರ್ ಕಾಂಗ್ರೆಸ್, ಪಂಪಾಪತಿ- ಬಿಎಸ್ಪಿ, ಚಿನ್ನಪ್ಪ ಕೊಟ್ರಿಕಿ- ಸಿಪಿಎಂ, ಶೇಖರಪ್ಪ ಶಿವಂಗಿ- ಜೆಡಿಯು, ಸುಭಾಷ್ ಚವ್ಹಾಣ- ರೈತ ಸಂಘ, ದಾನಮ್ಮ ಶಿವಶಂಕ್ರಪ್ಪ- ಪಕ್ಷೇತರ, ನಂದಪ್ಪ ಪರಮಣ್ಣ- ಪಕ್ಷೇತರ, ಬಲರಾಮ ಖೇಮಣ್ಣ-ಪಕ್ಷೇತರ, ಯಶೋಧರ ಭಜಂತ್ರಿ- ಪಕ್ಷೇತರ ಹಾಗೂ ಡಾ. ರಂಗನಾಥ- ಪಕ್ಷೇತರ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರ ಪ್ರಭು ಭಾನುವಾರ ಬರೆದಿದ್ದಾನೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ದಿನಗಣನೆ ಆರಂಭಗೊಂಡಿದ್ದು, ಎಲ್ಲರ ಚಿತ್ತ ಮತ ಎಣಿಕೆಯತ್ತ ಎನ್ನುವಂತಾಗಿದ್ದು, ಮೇ 8ರಂದು 14 ಅಭ್ಯರ್ಥಿಗಳ ಫಲಿತಾಂಶ ಹೊರಬೀಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement