ಆಡಳಿತ ಯಂತ್ರಕ್ಕೆ ಶೀಘ್ರ ಚುರುಕು: ವೆಂಕಟೇಶ್
ರಾಯಚೂರು: ದೇವದುರ್ಗ ಕ್ಷೇತ್ರದ ಮತದಾರರು ಬಿಜೆಪಿ ಶಾಸಕರ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ನ್ನು ಬೆಂಬಲಿಸಿದ್ದಾರೆ. ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಹೇಳಿಕೊಳ್ಳುವಂಥ ಕೆಲಸಗಳಾಗಿಲ್ಲ. ಮೊಟ್ಟ ಮೊದಲಿಗೆ ಕ್ಷೇತ್ರದಲ್ಲಿನ ಆಡಳಿತವನ್ನು ಸರಿದಾರಿಗೆ ತರುವುದು ತಮ್ಮ ಮುಖ್ಯಗುರಿ ಎಂದು ದೇವದುರ್ಗ ಕ್ಷೇತ್ರದ ವಿಜಯಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದ ವೆಂಕಟೇಶ್ ನಾಯಕ ಹೇಳಿದರು. ಅವರು ನಗರದಲ್ಲಿ ಬುಧವಾರ ಮತ ಎಣಿಕೆಯಲ್ಲಿ ಗೆಲವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಪಂ ಮಾಜಿ ಸದಸ್ಯ ರಾಜಶೇಖರ್ ನಾಯಕ ಇದ್ದರು.
--