ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ನಾಯಕ' ಸೋಲಿನ ಕಹಿ

Lingaraj Badiger
Updated On : 9 May 2013, 11:08 am

ರಾಯಚೂರು: 2008 ಮತ್ತು 2009ರ ಚುನಾವಣೆಯಲ್ಲಿಯಂತೆ ಈ ಬಾರಿಯೂ ಗೆಲವು ಸಾಧಿಸುವ ಮೂಲಕ ಸತತ ಗೆಲವಿನ ಸಾಧನೆ ತಮ್ಮ ನಾಯಕ ಮಾಡಿಯೇ ತೀರುತ್ತಾನೆಂದು ವಿಶ್ವಾಸದಿಂದಿದ್ದ ಬೆಂಬಲಿಗರಿಗೆ ನಿರಾಸೆ ಕಾದಿತ್ತು. ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಸೋಲು ಕಾಣುವ ಮೂಲಕ ಬೆಂಬಲಿಗರಲ್ಲಿ ನಿರಾಸೆ ಮೂಡಿದ್ದು ಕಂಡುಬಂದಿತು.
ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರ ಮನೆಯ ಬಳಿ ಬುಧವಾರ ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯ ಕಾರ್ಯಕರ್ತರು ವಿಜಯೋತ್ಸವ ಆಚರಣೆಗೆ ಕಾದಿದ್ದರು. ಚುನಾವಣೆಯ ನಂತರದಲ್ಲಿ ತಮ್ಮ ನಾಯಕ 20ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದು ಅನೇಕರು ಬೆಟ್ ಕಟ್ಟಿದ್ದರು. ಆದರೆ ಬುಧವಾರ ಮತಗಳ ಎಣಿಕೆ ನಂತರದಲ್ಲಿ ಶಿವನಗೌಡ ನಾಯಕ ಅವರ ಬೆಂಬಲಿಗರ ಲೆಕ್ಕಾಚಾರ ತಲೆಕೆಳಗಾಯಿತು.
ಅರಕೇರಾ ಗ್ರಾಮದ ಅವರ ಮನೆಯ ಬಳಿ ವಿಜಯೋತ್ಸವ ಆಚರಣೆಗೆಂದು ಪಟಾಕಿ ಸಿಡಿಸಲು ಸಜ್ಜಾಗಿದ್ದ ಅವರ ಬೆಂಬಲಿಗರು ತಮ್ಮ ನಾಯಕನ ಸೋಲಿನ ಸುದ್ದಿ ತಿಳಿದು ನಿರಾಶರಾಗಿದ್ದು ಕಂಡುಬಂದಿತು.

ಬಿಜೆಪಿ ಕಿತ್ತಾಟದಿಂದ ಹಿನ್ನಡೆ
ಫಲಿತಾಂಶ ಗೌರವಿಸುತ್ತೇನೆ: ಶಿವನಗೌಡ ನಾಯಕ
ರಾಯಚೂರು: ದೇವದುರ್ಗ ಕ್ಷೇತ್ರದ ಮತದಾರರು ನೀಡಿದ ಫಲಿತಾಂಶವನ್ನು ಗೌರವಿಸುತ್ತೇನೆ ಎಂದು ದೇವದುರ್ಗ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶಿವನಗೌಡ ನಾಯಕ ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಂಟಾದ ರಾಜಕೀಯ ಏರಿಳಿತಗಳು ಪಕ್ಷಕ್ಕೆ ತೀವ್ರ ಹಿನ್ನಡೆಯುಂಟು ಮಾಡಿದವು ಎಂದರು.
ಮತ ಎಣಿಕೆ ಕೇಂದ್ರದಲ್ಲಿ ದೇವದುರ್ಗ ಕ್ಷೇತ್ರದ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೇವದುರ್ಗ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಮತದಾರರು ಬೆಂಬಲಿಸಿದ್ದರು. ಪ್ರಸಕ್ತ ಚುನಮಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಬೆಂಬಲಿಸಿದ್ದಾರೆ. ಸೋಲು ಗೆಲವು ಸಹಜ ಎಂದು ಹೇಳಿದರು.
ಕ್ಷೇತ್ರದಲ್ಲಿ ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೂ, ಮತದಾರರು ತಮ್ಮ ಕೈಹಿಡಿಯಲಿಲ್ಲ. ಇದಕ್ಕೆ ಆಡಳಿತ ವಿರೋಧಿ ಅಲೆ ಕಾರಣ ಎನ್ನಲಾಗದು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವಾಗಿದೆ ಎಂದ ಅವರು, ತಾವು ಸೋಲಿನ ನಂತರದಲ್ಲಿಯೂ ಬಿಜೆಪಿ ಯಲ್ಲಿಯೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement