ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಕ್ಷ ಬದಲಿಸಿದರೂ ಗೆಲವು; ವಜ್ಜಲ್, ಪಾಟೀಲ್ ಸಾಧನೆ

Lingaraj Badiger
Updated On : 9 May 2013, 11:08 am

ರಾಯಚೂರು: ಅವರಿಬ್ಬರೂ ತಾವು ಕಳೆದ ಬಾರಿ ಪ್ರತಿನಿಧಿಸಿದ್ದ ಪಕ್ಷ ತೊರೆದು ಬೇರೆ ಪಕ್ಷ ಸೇರಿದರೂ ಪ್ರಸಕ್ತ ಚುನಾವಣೆಯಲ್ಲಿ ಗೆಲವು ಕಂಡರು.
ಹೌದು. ಲಿಂಗಸ್ಗೂರು ಕ್ಷೇತ್ರವನ್ನು ಕಳೆದ ಬಾರಿ ಬಿಜೆಪಿಯಿಂದ ಪ್ರತಿನಿಧಿಸಿದ್ದ ಮಾನಪ್ಪ ವಜ್ಜಲ್ ಅವರು ಬಿಜೆಪಿ ರಾಜಕೀಯ ಕಿತ್ತಾಟದಲ್ಲಿ ಒಮ್ಮೆ ಆ ಕಡೆ ಮತ್ತೊಮ್ಮೆ ಈ ಕಡೆಯ ಗುಂಪಿನಲ್ಲಿದ್ದು ಇನ್ನೊಮ್ಮೆ ತಟಸ್ಥರಾಗಿದ್ದರು. ಕೊನೆಗೆ ಬೇಸತ್ತು ತಮ್ಮ ಅಧಿಕಾರವಧಿಯ ಕೊನೆಗೆ ಜೆಡಿಎಸ್ ಸೇರಿದ್ದರು.
ಆ ಪಕ್ಷದಿಂದಲೇ ಪ್ರಸಕ್ತ ಚುನಾವಣೆಯಲ್ಲಿ ಅವರು ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಪಕ್ಷ ಬದಲಾಯಿಸಿದರೂ ಅವರ ಅದೃಷ್ಟ ಚೆನ್ನಾಗಿತ್ತು ಎಂದು ಹೇಳಬಹುದು. ಅವರು ಜೆಡಿಎಸ್‌ನಿಂದ ಈ ಬಾರಿ ಪುನಾ ಶಾಸಕರಾಗಿ ಲಿಂಗಸ್ಗೂರು ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ. ಪಕ್ಷ ಬದಲಿಸಿದರೂ ಇವರಿಗೆ ಗೆಲವು ಒಲಿದಿದೆ.
ಇನ್ನು ಲಿಂಗಸ್ಗೂರು ತಾಲೂಕಿನ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್ ಕೊನೆಗೆ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್‌ನಿಂದಲೇ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ಮತ್ತೆ ಎರಡನೇ ಬಾರಿಗೆ ಗೆಲವು ಕಂಡಿದ್ದಾರೆ. ಈ ಇಬ್ಬರೂ ಶಾಸಕರು ಪಕ್ಷ ಬದಲಿಸಿದರೂ ಮತದಾರರು  ಮಾತ್ರ ಇವರ ಕೈಬಿಟ್ಟಿಲ್ಲ. ವಿಜಯಲಕ್ಷ್ಮೀ ಮತ್ತೆ ಇವರ ಪಾಲಿಗೆ ಒಲಿದಿದ್ದಾಳೆ.

ನಿರಂತರ ಜ್ಯೋತಿ ಯೋಜನೆಗೆ ಗ್ರಹಣ
ಮುದಗಲ್: ಸುತ್ತಲಿನ ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಜ್ಯೋತಿ ಯೋಜನೆಯಡಿ ಹಲವಾರು ಗ್ರಾಮಗಳಿಗೆ ವಿದ್ಯುತ್ ಕಂಬ ಅಳವಡಿಸುವ ಯೋಜನೆಗೆ ಹಲವು ದಿನಗಳಿಂದ ಗ್ರಹಣ ಹಿಡಿದಂತಾಗಿದೆ. ಸಮೀಪದ ನಾಗಲಾಪುರ ಗ್ರಾಮದ 33 ಕೆವಿ ವಿದ್ಯುತ್ ಪ್ರಸರಣಾ ಕೇಂದ್ರದಿಂದ ನಿರಂತರ ಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿದೆ. 2011ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು ಉಳಿಮೇಶ್ವರ, ಪಿಕಳಿಹಾಳ, ವ್ಯಾಸನಂದಿಹಾಳ, ಕನ್ನಾಳ, ತಿಮ್ಮಾಪುರ, ಬಗ್ಗಲಗುಡ್ಡ, ತೀರ್ಥಬಾವಿ, ಮುಡಲದಿನ್ನಿ, ಸುಲ್ತಾನಪುರ, ಜಕ್ಕರಮಡು, ಬಾಬಾಕಟ್ಟಿ, ನಾನಾ ಕಡೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement