ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಡ್ಡಾಯ ಮತದಾನ: ಶೀಘ್ರ ಸುಪ್ರೀಂ ಕೋರ್ಟಿಗೆ ಮೊರೆ

Vishwanath S
Updated On : 10 May 2013, 12:29 pm

ರಾಯಚೂರು: ಪ್ರಸಕ್ತ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವಿಗೆ ಕಡಿಮೆ ಮತದಾನದ ಪ್ರಮಾಣವೇ ಕಾರಣ. ಈ ಹಿನ್ನೆಲೆ ಮತದಾನವನ್ನು ಎಲ್ಲ ಅರ್ಹರಿಗೆ ಕಡ್ಡಾಯವಾಗಿಸುವಂತೆ ಕೋರಿ ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟಿಗೆ ಮೊರೆ ಹೋಗುವುದಾಗಿ ಪರಾಜಿತ ಕೆಜೆಪಿ ಅಭ್ಯರ್ಥಿ ಬಸವರಾಜ ಕಳಸ ಹೇಳಿದರು.
ನಗರದಲ್ಲಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಚುನಾವಣೆಯಲ್ಲಿ ನಗರ ಕ್ಷೇತ್ರ ಸೇರಿದಂತೆ ಇನ್ನುಳಿದೆಡೆ ಮತದಾನದ ಪ್ರಮಾಣ ಕಡಿಮೆಯಾಗಿದೆ. ಕಡಿಮೆ ಮತದಾನದ ಪ್ರಮಾಣದಲ್ಲಿಯೇ ಹೆಚ್ಚಿನ ಮತ ಪಡೆದವರು ಶಾಸಕರಾಗಿ ಕಾರ್ಯನಿರ್ವಹಿಸುವುದು ಎಷ್ಟರಮಟ್ಟಿಗೆ ಸರಿ?
ಈ ನಿಟ್ಟಿನಲ್ಲಿ ರಾಜ್ಯವಷ್ಟೇ ಅಲ್ಲ ದೇಶದಲ್ಲಿರುವ ಎಲ್ಲ ಅರ್ಹ ಮತದಾರರು ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಆದೇಶಿಸಲು ಸುಪ್ರೀಂಕೋರ್ಟಿಗೆ ರಿಟ್ ಸಲ್ಲಿಸುವುದಾಗಿ ಹೇಳಿದರು.
ಮತದಾನದಲ್ಲಿ ಪಾಲ್ಗೊಳ್ಳದವರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಕಡಿತಗೊಳಿಸಲು ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ತಿಳಿಸಿದ ಅವರು, ಕನಿಷ್ಠ ಮುಂಬರುವ ಲೋಕಸಭೆ ಚುನಾವಣೆಯಲ್ಲಾದರೂ ಪೂರ್ಣ ಪ್ರಮಾಣದ ಮತದಾನ ಮಾಡುವಂತಾಗಲು ಈ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement