ಇಂದು ಕಾಳಿಕಾದೇವಿ ನೂತನ ಶಿಲಾ ಮಂದಿರ ಉದ್ಘಾಟನೆ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಮೇ 11 ಶನಿವಾರದಿಂದ ಮೇ 13 ರವರೆಗೆ ಕಾಳಿಕಾದೇವಿ ಪ್ರತಿಷ್ಠಾಪನಾ ಸಮಿತಿ ಮತ್ತು ಸದ್ಭಕ್ತರು ಮರಿಕಲ್ಯಾಣಿ ಬಳಗಾನೂರ ವತಿಯಿಂದ ಕಾಳಿಕಾದೇವಿಯ ನೂತನ ಶಿಲಾ ಮಂದಿರ ಉದ್ಘಾಟನೆ, ಕಾಳಿಕಾದೇವಿಯ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನೆ, ನೂತನ ವಿಶ್ವಕರ್ಮ ಸಾಂಸ್ಕೃತಿಕ ಕಲಾ ಭವನ ಉದ್ಘಾಟನೆ ಕಾರ್ಯಕ್ರಮ ಜರುಗಲಿವೆ.
ಮೇ 11ರಂದು ಶನಿವಾರ ಮುಂಜಾನೆ 8.30ಕ್ಕೆ ಪೂರ್ಣ ಕುಂಭ- ಕಳಸದೊಂದಿಗೆ, ಸಕಲ ಮಂಗಲ ವಾದ್ಯಗಳೊಡನೆ ದೇವದುರ್ಗದ ಅಜ್ಜೇಂದ್ರಸ್ವಾಮಿಗಳ ನೇತೃತ್ವದಲ್ಲಿ ನೂತನ ಕಾಳಿಕಾದೇವಿಯ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಳಸಾರೋಹಣ ಜರಗುವುದು.
ಮೇ 12ರಂದು ಬೆಳಿಗ್ಗೆ ಆವಾಹಿತ ದೇವತಾಪೂಜೆ, ನವಗ್ರಹಾದಿ ವಾಸ್ತುಹೋಮ, ಕಲಾಹೋಮ, ಮತ್ತಿತರ ಹೋಮಗಳಿ ನಡೆಯಲಿವೆ. ಸಾಯಂಕಾಲ ವಿಶೇಷ ಪೂಜಾ ಕಾರ್ಯಕ್ರಮ ನಂತರ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಹಿರಿಯ ಪುರೋಹಿತ ವರ್ಗದವರಿಂದ ಮೇ 13ರಂದು ಬೆಳಿಗ್ಗೆ ವಿಶೇಷ ಪೂಜೆ ಶುಭ ಮೂಹೂರ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ. ಕುಂಬಾಭಿಷೇಕ, ಪಂಚಾಂಮೃತಭಿಷೇಕ, ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಮಹಾಪ್ರಸಾದ ನಂತರ ಧಾರ್ಮಿಕ ಸಭೆ ಜರಗುತ್ತದೆ.
ಧಾರ್ಮಿಕ ಸಭೆಯಲ್ಲಿ ಮದಾನೆಗುಂದಿ ಮೂಲಸಂಸ್ಥಾನ ಸರಸ್ವತಿ ಪೀಠ ದೇವದುರ್ಗದ ಅಜ್ಜೇಂದ್ರ ಮಹಾಸ್ವಾಮಿಗಳ ತುಲಾಭಾರ, ಭೂದಾನಿಗಳಿಗೆ ಸನ್ಮಾನ ಕಾರ್ಯಕ್ರಮಗಳು ಜರಗುತ್ತವೆ.
ಕಾರ್ಯಕ್ರಮಗಳ ಸಾನಿಧ್ಯವನ್ನು ದೇವದುರ್ಗದ ಅಜ್ಜೇಂದ್ರ ಮಹಾಸ್ವಾಮಿಗಳು ವಹಿಸುವರು, ಏಕದಂಡಿಗಿ ಮಠದ ಗುರುನಾಥ ಸ್ವಾಮಿಗಳು, ಶಹಾಪುರದ ಕಾಲಹಸ್ತೇಂದ್ರ ಸ್ವಾಮಿಗಳು, ಲೇಬಗಿರಿ ನಾಗಮೂತೇಂದ್ರ ಸ್ವಾಮಿಗಳು, ಲೇಬಗಿರಿಯ ಅಯ್ಯೇಂದ್ರ ಸ್ವಾಮಿಗಳು, ಪಾಲತಿಯ ನೀಲಕಂಠ ಸ್ವಾಮಿಗಳು, ದೇವದುರ್ಗದ ಅಯ್ಯಪ್ಪ ಮಹಾಸ್ವಾಮಿಗಳು, ದೇವದುರ್ಗದ ಮೌನೇಶ ಸ್ವಾಮಿಗಳು, ಜವಳಗೇರಾದ ಸೂರ್ಯನಾರಾಯಣ ಸ್ವಾಮಿಗಳು, ಉಪ್ಪಾರ ಹೊಸಳ್ಳಿಯ ನಾಗಲಿಂಗಸ್ವಾಮಿಗಳು, ತಿಂಥಣಿಯ ಗಂಗಾಧರ ಸ್ವಾಮಿಗಳು, ಸೋಲ್ಲಾಪುರ ವೀರತಪಸ್ವಿ ವೀರಭದ್ರಸ್ವಾಮಿಗಳು, ರೌಡಕುಂದಾದ ಮರಿಸಿದ್ದಲಿಂಗ ಶಿವಾಚಾರ್ಯರು, ಹಳೇಕೋಟೆಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ದೇವರ ಬೂಪುರದ ಜಗದಂಡ ಶಿವಾಚಾರ್ಯರು, ಸಂತೆಕಲ್ಲೂರು ಗುರು ಬಸವ ಶಿವಯೋಗಿಗಳು, ಉಟಕನೂರು ದೇಶಿಕೇಂದ್ರ ಮಠದ ಮರಿಬಸವರಾಜ ಸ್ವಾಮಿಗಳು, ಗ್ರಾಮದ ಕೇದಾರನಾಥ ಸ್ವಾಮಿಗಳು, ನಾಗಲಿಂಗಪ್ಪ ತಾತನವರು, ಸಿದ್ದಯಸ್ವಾಮಿ, ಗಚ್ಚಿನಮಠದ ಸಿದ್ದಯ್ಯಸ್ವಾಮಿಗಳು, ಸೇರಿದಂತೆ ವಿವಿಧ ಮಠದ ಮಠಾಧೀಶರು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾಯಕ್ರಮಗಳಿಗೆ ಸದ್ಭಕ್ತರು ಆಗಮಿಸುವಂತೆ ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.