ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಡುಗೆ ಸಿಲಿಂಡರ್ ಕಳವು

Vishwanath S
Updated On : 12 May 2013, 11:43 am

ರಾಯಚೂರು: ನಗರದ ರೇಲ್ವೆ ಸ್ಟೇಷನ್ ರಸ್ತೆಯ ಗೋಲ್ ಮಾರ್ಕೆಟ್ ಪ್ರದೇಶದ ಮನೆಯೊಂದರಿಂದ ಅಡುಗೆ ಅನಿಲ ಸಿಲಿಂಡರ್ ಕಳವು ಮಾಡಲಾಗಿದೆ.
ಬಡಾವಣೆಯ ನಿವಾಸಿ ಡಾ. ವಿರೂಪಾಕ್ಷಪ್ಪ ಎಂಬುವವರ ಮನೆಯ ಆವರಣದಲ್ಲಿರಿಸಿದ್ದ ಸಿಲಿಂಡರ್ ರಾತ್ರಿ ವೇಳೆ ಕದ್ದೊಯ್ಯದಿದ್ದಾರೆಂದು ಪೊಲೀಸರಿಗೆ ದೂರಲಾಗಿದೆ. ಈ ಕುರಿತು ರಾಯಚೂರು ಪಶ್ಚಿಮ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಡಿಕ್ಕಿ: ಇಬ್ಬರಿಗೆ ಗಾಯ
ರಾಯಚೂರು: ಮಾನವಿ ತಾಲೂಕಿನ ಕವಿತಾಳ ಗ್ರಾಮದ ವೀರೇಶ ದಾಬಾ ಬಳಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು ಅದರ ಸವಾರರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಹನುಮಂತ ಮತ್ತು ಮಲ್ಲಪ್ಪ ಎಂದು ಗುರುತಿಸಲಾಗಿದೆ. ಇವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದಿದ್ದು ಬೈಕ್‌ನಿಂದ ಕೆಳಗೆ ಬಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement