ವಿದ್ಯುತ್ ಸ್ಪರ್ಶ: 9 ಜಾನುವಾರು ಸಾವು
ದೇವದುರ್ಗ: ತಾಲೂಕಿನ ಕಕ್ಕಲದೊಡ್ಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ 9 ಜಾನುವಾರುಗಳು ಸಾವಿಗೀಡಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಚನ್ನಬಸವ, ಹನುಮಂತ, ಶಶಿಧರ್, ಗೋವಿಂದರೆಡ್ಡಿ, ಪ್ರಿಯಾ ಮಲ್ಲಪ್ಪ, ಕಿರಿಯಪ್ಪ, ಮಲ್ಲಿಕಾರ್ಜುನ ಎಂಬುವವರಿಗೆ ಸೇರಿದ ಐದು ಎಮ್ಮೆ, 1 ಹೋರಿ, ಮೂರು ಹಸುಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ.
ಗ್ರಾಮದಲ್ಲಿ ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಈ ಘಟನೆ ಸಂಭವಿಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಯುವ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ರಾಜಶೇಖರ್ ನಾಯಕ ವೈಯಕ್ತಿಕ ಪರಿಹಾರ ನೀಡಿ ಸರ್ಕಾರದಿಂದಲೂ ಪರಿಹಾರ ಕೊಡಿಸುವ ಭರವಸೆ ನೀಡಿದರು.