ಸಿದ್ದು ಅಭಿಮಾನಿಗಳಿಂದ ಸಂಭ್ರಮಾಚರಣೆ
ರಾಯಚೂರು: ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಕ್ಕೆ ನಗರದ ತಿಮ್ಮಾಪುರ ಪೇಟೆಯಲ್ಲಿ ಅವರ ಅಭಿಮಾನಿಗಳು ಶನಿವಾರ ಸಂಭ್ರಮಾಚರಿಸಿದರು.
ನಗರದ ತಿಮ್ಮಾಪುರ ಪೇಟೆಯ ಶ್ರೀಬಾಲಮಾರೆಮ್ಮ ದೇವಿ ದೇವಸ್ಥಾನದಲ್ಲಿ ನೂತನ ಸಿಎಂ ಸಿದ್ದರಾಮಯ್ಯ ಅವರ ಆಯ್ಕೆಗೆ ಶುಭ ಕೋರಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಾಚರಿಸಿದರು. ನಂತರ ನಗರದ ಹನುಮಾನ್ ಚಿತ್ರಮಂದಿರ ಸರ್ಕಲ್, ತೀನ್ ಕಂದೀಲ್ ಮತ್ತಿತರೆಡೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಅವರ ಬೆಂಬಲಿಗರು ನಿಯೋಜಿತ ಸಿಎಂ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ರಾಜ್ಯವು ಸಮಗ್ರ ಪ್ರಗತಿ ಕಂಡು ಆರ್ಥಿಕವಾಗಿ ಬಲಿಷ್ಠಗೊಳ್ಳಲಿ ಎಂದು ಹಾರೈಸಿದರು. ಈ ವೇಳೆ ಸಿದ್ದರಾಮಯ್ಯ ಅವರ ಅಭಿಮಾನಿಗಳಾದ ಕೆ.ಟಿ.ಶ್ರೀನಿವಾಸ್, ಹನುಮಂತು ಕಡಗೋಲು, ತಿಮ್ಮರಾಜು, ಕೆ.ನರಸಿಂಹಲು, ಲಕ್ಷ್ಮಣ ಕೊಲಿಮಿ, ಗುರುರಾಜ್ ಘೋಡಗೇರಿ, ಜಿ.ಕೃಷ್ಣ, ತಿಮ್ಮಪ್ಪ ಯಾದವ್, ರಂಗನಾಥ್, ಮಲ್ಲೇಶ ಮಂಡ್ಲಗೇರಿ ಇದ್ದರು.