ಆಮದಿಹಾಳದಲ್ಲಿ ಸಂಭ್ರಮ
ಮುದಗಲ್: ಹಾಲುಮತ ಸಮಾಜದ ಮುಖಂಡ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಇಲ್ಲಿಗೆ ಸಮೀಪದ ಆಮದಿಹಾಳ ಗ್ರಾಮದಲ್ಲಿ ಸಮಾಜದ ಮುಖಂಡರು ಸಂಭ್ರಮಾಚರಣೆ ಆಚರಿಸಿದರು.
ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಬಸವಣ್ಣನ ಭಾವಚಿತ್ರ ಮತ್ತು ಸಿದ್ದರಾಮಯ್ಯನವರ ಭಾವಚಿತ್ರವನ್ನು ಗ್ರಾಮ ಪಂಚಾಯಿತಿಯಿಂದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಬಾರಿಸುತ್ತ ಸಿದ್ದರಾಮಯ್ಯನವರಿಗೆ ಜೈ ಕಾರ ಹಾಕುತ್ತ ಮೆರವಣಿಗೆ ಮಾಡಿದರು. ಜಿಪಂ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್ಲ, ಅಮರೇಶ, ಹೊನ್ನಪ್ಪ ಕರಿಸಿರಿ, ರಾಮಣ್ಣ ಬಿಜ್ಜೂರ, ವೆಂಕಪ್ಪ ಪೂಜಾರಿ ಭಾಗವಹಿಸಿದ್ದರು.
ಜೈ ಕರವೇ ಗೌರವ
ರಾಯಚೂರು: ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಪುತ್ಥಳಿಗೆ ಜೈ ಕರವೇ ಜಿಲ್ಲಾಧ್ಯಕ್ಷ ಗಂಗಾಧರ ಸ್ವಾಮಿ ಬಸವ ಜಯಂತಿ ಸಂದರ್ಭ ಗೌರವ ಸಲ್ಲಿಸಿದರು. ಪ್ರಮುಖರಾದ ಅಶೋಕ ಶೆಟ್ಟಿ, ಲಕ್ಷ್ಮಣ ವಕೀಲರು, ಮಾರೆಪ್ಪ, ರಮೇಶ ವಕೀಲರು, ಭಾಗ್ಯಜ್ಯೋತಿ ಮತ್ತಿತರರು ಇದ್ದರು.
ಉಚ್ಚಾಯ ಕಾರ್ಯಕ್ರಮ
ರಾಯಚೂರು: ನಗರದ ಬೇರೂನ್ ಖಿಲ್ಲಾ ಪ್ರದೇಶದ ವರಕಟ್ಟೆ ಬಸವೇಶ್ವರ ದೇವಸ್ಥಾನ ಸಮಿತಿಯಿಂದ ಬಸವ ಜಯಂತಿ ಸಂದರ್ಭ ಉಚ್ಚಾಯ ಆಯೋಜಿಸಲಾಗಿತ್ತು.
ಬೇರೂನ್ ಖಿಲ್ಲಾದಲ್ಲಿರುವ ದೇವಸ್ಥಾನದಲ್ಲಿ ಅಂದು ಬೆಳಗ್ಗೆ 6ಕ್ಕೆ ರುದ್ರಾಭಿಷೇಕ ನಡೆಸಲಾಯಿತು.
ಅದೇ ದಿನ ಸಂಜೆ 6ಕ್ಕೆ ಆಯೋಜಿಸಿದ್ದ ಬಸವೇಶ್ವರರ ಉಚ್ಚಾಯವು ಕಿಲ್ಲೆ ಬ್ರಹನ್ಮಠ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಾಪಸಾಯಿತು. ಈ ಉಚ್ಚಾಯ ಕಾರ್ಯಕ್ರಮದಲ್ಲಿ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.
ಉಚ್ಚಾಯ ಕಾರ್ಯಕ್ರಮದಲ್ಲಿ ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು, ವರಕಟ್ಟೆ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಎಂ.ಶಂಕರ್, ಮಲ್ಲಪ್ಪ ವಕೀಲರು, ನಗರಸಭೆ ಮಾಜಿ ಸದಸ್ಯ ದರೂರು ಬಸವರಾಜ ಪಾಟೀಲ್, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಖಜಾಂಚಿ ರವಿಕುಮಾರ್ ಬಿಂದಲಭಾವಿ, ಮಹಾದೇವ, ಸೂರ್ಯಕಾಂತ ಸೇರಿದಂತೆ ಅನೇಕರಿದ್ದರು. ವಿವಿಧ ಕಾರ್ಯಕ್ರಮಗಳನ್ನು ಬಸವ ಜಯಂತಿ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು.