ಗುರುಗುಂಟಾದಲ್ಲಿ ಬಸವ ಜಯಂತಿ
ಲಿಂಗಸ್ಗೂರು: ತಾಲೂಕಿನ ಗುರುಗುಂಟಾ ಗ್ರಾಮದ ವೀರಶೈವ ಯುವಕ ಸಂಘದಿಂದ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.
ಗ್ರಾಮದ ಅಮರೇಶ್ವರ ಕಳಸದ ಗುಡಿಯಲ್ಲಿ ಸಮಾಜದ ಮುಖಂಡ ಆದಯ್ಯ ಸ್ವಾಮಿ ಬಸವೇಶ್ವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು. ಮುಖಂಡರಾದ ಗುರುಸಿದ್ದಪ್ಪ ಯಲಿಗಾರ, ಗುಂಡಣ್ಣ ಅರಳಿ, ಈರಣ್ಣ ಬಲ್ಲಟಗಿ, ಯುವಕ ಸಂಘದ ಯುವ ಮುಖಂಡರಾದ ಚನ್ನಬಸಯ್ಯ ಹೊರಪೇಟಿಮಠ, ಶಿವರಾಜ ಯಲಿಗಾರ, ಬಸವರಾಜ ಕುಂಬಾರ, ಅಮರೇಶ ಹಡಪದ, ಬಸವರಾಜ ಸಜ್ಜನ, ಬಸವರಾಜ ಹೂಗಾರ, ಮಲ್ಲಯ್ಯ ಸ್ವಾಮಿ, ಸಂಗಮೇಶ ಇದ್ದರು. ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಂಕರ ಅರಳಿ ವಿದ್ಯಾರ್ಥಿಯನ್ನು ಯುವಕ ಮಂಡಳಿಯಿಂದ ಸನ್ಮಾನಿಸಲಾಯಿತು.
ಭಗೀರಥ ಜಯಂತಿ
ಸಿಂಧನೂರು: ಉಪ್ಪಾರ ಸಮಾಜದ ಗುರುಗಳಾದ ಭಗೀರಥ ಮಹರ್ಷಿ ಜಯಂತಿಯನ್ನು ಮೇ 17ರಂದು ಆಚರಿಸಲಾಗುತ್ತದೆ. ಜಯಂತಿಯ ದಿನದಂದು ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು- ಹಂಪಲು ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಿಂಧನೂರಿನ ಉಪ್ಪಾರ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸುರೇಶ ಹೊಸಮನಿ, ಧರ್ಮರಾಜ ಉಪ್ಪಾರ, ಉಮೇಶ ಗೋಮರ್ಸಿ ವಿನಂತಿಸಿದ್ದಾರೆ.
--