ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಡೆಂಘೀಗೆ ಬಾಲಕಿ ಬಲಿ: ಶಾಸಕರಿಂದ ಪರಿಹಾರ

Lingaraj Badiger
Updated On : 15 May 2013, 12:12 pm

ದೇವದುರ್ಗ: ತಾಲೂಕಿನ ಆಲ್ಕೋಡ್ ಗ್ರಾಪಂ ವ್ಯಾಪ್ತಿಯ ಭೂಮನಗುಂಡ ಗ್ರಾಮದಲ್ಲಿ ಸೋಮವಾರ ಡೆಂಘೀ ಜ್ವರದಿಂದ ಬಳಲಿ ಬಾಲಕಿ ಸಾವಿಗೀಡಾಗಿದ್ದಾಳೆ.
ಮೃತಳನ್ನು ಸ್ನೇಹಾ (6) ಎಂದು ಗುರುತಿಸಲಾಗಿದೆ. ಈಕೆ ಕಳೆದ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಡೆಂಘೀ ಜ್ವರವೆಂದು ವೈದ್ಯರು ಖಚಿತ ಪಡಿಸಿ ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಆಕೆ ಕೊನೆಯುಸಿರೆಳೆದಿದ್ದಳು.
ಭೇಟಿ: ಡೆಂಘೀ ಜ್ವರದಿಂದ ಬಳಲಿ ಮೃತಳಾದ ಬಾಲಕಿ ಸ್ನೇಹಾ ಅವರ ಸಂಬಂಧಿಗಳನ್ನು ಮಂಗಳವಾರ ಶಾಸಕ ವೆಂಕಟೇಶ ನಾಯಕ ಭೇಟಿ ಮಾಡಿ ಸ್ವಾಂತನ ಹೇಳಿದರು.
ಮೃತಳ ಕಟುಂಬಕ್ಕೆ ಶಾಸಕರು ವೈಯಕ್ತಿಕ 5 ಸಾವಿರ ಪರಿಹಾರ ವಿತರಿಸಿದರು.
ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ನಾಯಕ ಶಾಸಕರಿಗೆ ಮಾಹಿತಿ ನೀಡಿ, ಭೂಮನಗುಂಡ ಗ್ರಾಮದಲ್ಲಿ ಡೆಂಘೀ ಜ್ವರದ ಶಂಕಿತರು ಪತ್ತೆಯಾಗಿದ್ದು, ರಕ್ತಪರೀಕ್ಷೆ ಮಾಡಲಾಗುತ್ತಿದೆ. 17 ಶಂಕಿತ ಡೆಂಘೀ ಜ್ವರದ ಪ್ರಕರಣ ಪತ್ತೆಯಾಗಿದ್ದು, ಪ್ರಶಾಂತ ಎಂಬಾತನಿಗೆ ಡೆಂಘೀ ಜ್ವರ ದೃಢಪಟ್ಟಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಆಸ್ಪತ್ರೆಗೆ ಕಳಿಸಲಾಗುತ್ತದೆ ಎಂದು ತಿಳಿಸಿದರು.
ಸೂಕ್ತ ರೀತಿಯಲ್ಲಿ ಚಿಕಿತ್ಸೆ ಗ್ರಾಮಸ್ಥರಿಗೆ ದೊರೆಯದಿರುವ ಬಗ್ಗೆ ಜನತೆ ಶಾಸಕರಿಗೆ ದೂರಿದರು. ಕೂಡಲೇ ಅವರು ಗ್ರಾಮದಲ್ಲಿ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಚಂದ್ರಕಾಂತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸಯ್ಯ ಶಾಖೆ, ಮೃತ್ಯುಂಜಯ ಸ್ವಾಮಿ ಹಿರೇಮಠ, ಹನುಮಂತ್ರಾಯ ಚಿಕ್ಕಗುಡ್ಡ, ಶಿವಣ್ಣ ಪೈಕಾರ, ನರಸಪ್ಪ ಕೋತ್ವಾಲ್, ಅಹ್ಮದ ಬಡಿಗೇರ, ಸಿದ್ದಯ್ಯಸ್ವಾಮಿ, ಹನುಮಯ್ಯ ನಾಯಕ, ನಾಗೇಂದ್ರ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement