ಮಹಾದ್ವಾರ ಸಮರ್ಪಣೆ, ಕಲಶಗಳ ಸ್ಥಾಪನೆ
ರಾಯಚೂರು: ಮಂತ್ರಾಲಯದಲ್ಲಿ ಮಂಗಳವಾರ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮಹಾದ್ವಾರದ ಸಮರ್ಪಣೆ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮಹಾದ್ವಾರದ ಹಿನ್ನೆಲೆಯಲ್ಲಿ ಹೋಮಗಳ ಆಚರಣೆಗೆ ಪೂರ್ವದಲ್ಲಿ ಕಲಶಗಳ ಸ್ಥಾಪನೆ ನೆರವೇರಿಸಲಾಯಿತು. ಮಹಾದ್ವಾರದ ದಾನಿಗಳಾದ ಹೊಸಪೇಟೆಯ ಉದ್ಯಮಿ ರಂಗನಗೌಡ ದಂಪತಿ ಮತ್ತು ಕುಟುಂಬ ವರ್ಗದವರು ಕಲಶ ಸ್ಥಾಪನೆ, ಪುಣ್ಯಾಹವಾಚನ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಶ್ರೀಮಠದ ಪ್ರಮುಖರು ಹಾಗೂ ಅರ್ಚಕರು ಉಪಸ್ಥಿತರಿದ್ದರು.