ಯುವಕ ಅಬ್ಬಾಸಲಿ ಸಾವು: ಕೊಲೆ ಶಂಕೆ
ಲಿಂಗಸ್ಗೂರು: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಯುವಕನೊಬ್ಬ ಸಾವಿಗೀಡಾಗಿದ್ದು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಸ್ಥಳೀಯ ಕಬ್ಬೇರ ಓಣಿಯ ಮೃತ ಯುವಕ ಅಬ್ಬಾಸಲಿ ಮಹ್ಮದ್ಸಾಬ್(38) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳವಾರ ಡಿವೈಎಸ್ಪಿ ಅನಿತಾ ಹದ್ದಣ್ಣವರ್, ಸಿಪಿಐ ಪಂಚಾಕ್ಷರಯ್ಯ, ಪಿಎಸ್ಐ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಚಿತ್ರನಾಳ ಗ್ರಾಮದ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ವಿವಾದವಿತ್ತು. ಸೋಮವಾರ ರಾಜಿ ಸಂಧಾನ ನಡೆದಿತ್ತು ಎಂದು ಸಂಶಯ ವ್ಯಕ್ತಪಡಿಸಿ ಮೃತನ ಸಹೋದರ ಅಲ್ಲಾಭಕ್ಷ ಠಾಣೆಗೆ ದೂರು ನೀಡಿದ್ದಾನೆ.
--