ಹಣ ಕಳ್ಳತನ: ಆರೋಪಿಗಳು ಪರಾರಿ
ಲಿಂಗಸ್ಗೂರು: ಪಟ್ಟಣದ ಎಸ್ಬಿಹೆಚ್ ಬ್ಯಾಂಕ್ ಶಾಖೆಯಿಂದ ಮಂಗಳವಾರ ಒಂದು ಲಕ್ಷ ರೂ. ಡ್ರಾ ಮಾಡಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಅಪರಿಚಿತ ಯುವಕರು ಗಮನ ಬೇರೆಡೆ ಸೆಳೆದು ನಗದು ತೆಗೆದುಕೊಂಡು ಪರಾರಿಯಾಗಿದ್ದಾರೆಂದು ವಿಸಿಬಿ ಕಾಲೇಜು ಉಪನ್ಯಾಸಕ ಚಂದ್ರಶೇಖರ ಪಾಟೀಲ್ ಆರೋಪಿಸಿದ್ದಾರೆ.
ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಶಾಖೆಯಿಂದ ಮಂಗಳವಾರ ಮಧ್ಯಾಹ್ನ ಒಂದು ಲಕ್ಷ ಡ್ರಾ ಮಾಡಿ, ಚೀಲದಲ್ಲಿಟ್ಟು ಕಾರಿನ ಲ್ಲಿ ಮುಂಭಾಗದಲ್ಲಿಟ್ಟುಕೊಂಡು ಸ್ಕೂಲಿಗೆ ಹೋಗಿ ಮರಳಿ ಬರುವಾಗ ಇಬ್ಬರು ಅಪರಿಚಿತ ಯುವಕರು ಕಾರಿನ ಹಿಂದಿನ ಟೈಯರ್ ಪಂಕ್ಟರ್ ಆಗಿದೆ ಎಂದು ಹೇಳಿದರು. ಆಗ ಕಾರನ್ನು ಜ್ಯೋತಿ ಹಾರ್ಡವೇರ್ ಬಳಿ ನಿಲ್ಲಿಸಿ ಟೈಯರ್ ನೋಡುತ್ತಿದ್ದಾಗ ಕಾರಿನ ಮುಂಭಾಗದ ಬಾಗಿಲು ತೆಗೆದು ನಗದು ಹಣವಿದ್ದ ಚೀಲವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆಂದು ಉಪನ್ಯಾಸಕ ಚಂದ್ರಶೇಖರ ಪಾಟೀಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
--