ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೃಶ್ಯಕಲಾ ಕಾಲೇಜು: ಪ್ರವೇಶಕ್ಕೆ ಆಹ್ವಾನ

Mainashree
Updated On : 17 May 2013, 11:46 am

ರಾಯಚೂರು: ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿಗೆ 2013-14ನೇ ಶೈಕ್ಷಣಿಕ ಸಾಲಿಗೆ ವಿವಿಧ ಕೋರ್ಸುಗಳಿಗೆ ಪ್ರವೇಶಕ್ಕೆ ಆಸಕ್ತರಿಂದ ಅರ್ಜಿ ಕರೆಯಲಾಗಿದೆ.
ಪ್ರಥಮ ಮೂಲ ತರಗತಿ ಹಾಗೂ ಪ್ರಥಮ ಬಿ.ಎಫ್.ಎ ತರಗತಿ(ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ (ಗ್ರಾಫಿಕ್ಸ್), ಅನ್ವಯಕಲೆ, ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ಹಾಗೂ ಕಲಾ ಇತಿಹಾಸ) ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ ಮೂಲ ತರಗತಿಗೆ ಪ್ರವೇಶ ಬಯಸುವವರು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರಥಮ ಬಿ.ಎಫ್.ಎ. ತರಗತಿಗೆ ಪ್ರವೇಶ ಬಯಸುವವರು ದ್ವಿತೀಯ ಮೂಲ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರವೇಶದ ಅರ್ಜಿ ಮತ್ತು ವಿವರಣ ಪತ್ರಿಕೆಯನ್ನು ಪಡೆಯಲು ರು. 125 ಪಾವತಿಸಿ ಖುದ್ದಾಗಿ ಅಥವಾ ರು. 150 ಡಿಡಿಯನ್ನು ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಕಳುಹಿಸಿ ಅರ್ಜಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜೂ. 4 ಕಡೆದಿನವಾಗಿದ್ದು, ಅರ್ಹತಾ ಪರೀಕ್ಷೆ ಜೂ.11ರಂದು ಬೆಳಗ್ಗೆ 11ಕ್ಕೆ ಮೈಸೂರಿನ ಸಯ್ಯಾಜೀರಾವ್ ರಸ್ತೆಯಲ್ಲಿರುವ ಸಿಟಿಐ ಕಟ್ಟಡದಲ್ಲಿ ನಡೆಸಲಾಗುವುದು. ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement