ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಾಲಯ ಮಠದ ಮಹಾದ್ವಾರ ಸಮರ್ಪಣೆ

Mainashree
Updated On : 17 May 2013, 11:47 am

ಕನ್ನಡಪ್ರಭ ವಾರ್ತೆ  ರಾಯಚೂರು  ಮೇ 16
ಮಂತ್ರಾಲಯದಲ್ಲಿ ಗುರುವಾರ ಸಂಜೆ ರಾಘವೇಂದ್ರ ಸ್ವಾಮಿಗಳ ಮಠದ ಮುಖಮಂಟಪ(ಮಹಾದ್ವಾರ)ದ ಉದ್ಘಾಟನೆ ನೆರವೇರಿಸಲಾಯಿತು.
ಶ್ರೀಮಠದಲ್ಲಿ ಕಳೆದ ಎರಡು ದಿನಗಳಿಂದ ಮಹಾದ್ವಾರದ ಉದ್ಘಾಟನೆ ಅಂಗವಾಗಿ ಕಲಶ ಸ್ಥಾಪನೆ, ವಿವಿಧ ಹೋಮ- ಹವನಗಳನ್ನು ಆಯೋಜಿಸಲಾಗಿತ್ತು. ಹೋಮಗಳ ಪೂರ್ಣಾಹುತಿಯನ್ನು ವಿದ್ವಾಂಸರು, ಪಂಡಿತರು ಗುರುವಾರ ಬೆಳಗ್ಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾದ್ವಾರದ ದಾನಿಗಳಾದ ಹೊಸಪೇಟೆಯ ಉದ್ಯಮಿ ರಂಗನಗೌಡರು ದಂಪತಿ ಮತ್ತು ಕುಟುಂಬದವರು ಹಾಗೂ ಕೊಪ್ಪಳದ ಮಾಜಿ ಸಂಸದ ಎಚ್.ಜಿ. ರಾಮುಲು ಸೇರಿ ಅನೇಕರು ಉಪಸ್ಥಿತರಿದ್ದು ಹೋಮದ ಪೂರ್ಣಾಹುತಿ ನೆರವೇರಿಸಿದರು.
ನಂತರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳಾದ ಶ್ರೀಸುಯತೀಂದ್ರತೀರ್ಥರು ಮಹಾದ್ವಾರವನ್ನು ಉದ್ಘಾಟಿಸಿದರು. ಈ ವೇಳೆ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯರು, ಪವಮಾನಾಚಾರ್ಯರು, ದಾನಿಗಳಾದ ರಂಗನಗೌಡರು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಶ್ರೀಗಳು ದಾನಿಗಳನ್ನು ಹಾಗೂ ಅವರ ಕುಟುಂಬ ವರ್ಗದವರನ್ನು ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement