ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕುಡಿವ ನೀರಿನ ಸಮಸ್ಯೆ ನೀಗಿಸಲು ಸದಸ್ಯರ ಮನವಿ

Vishwanath S
Updated On : 19 May 2013, 11:54 am

ಸಿಂಧನೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲಿದ್ದು ಕೆರೆಯಲ್ಲಿ ಸಂಗ್ರಹಿಸಿದ ನೀರು ಜೂ. 30ರವರೆಗೆ ಮಾತ್ರ ಸರಿ ಹೋಗಬಹುದು. ಜುಲೈ ಅಂತ್ಯದವರೆಗೆ ನೀರಿನ ಸಮಸ್ಯೆ ಭೀಕರಗೊಳ್ಳಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಲಿಂಗಸ್ಗೂರು ಉಪ ವಿಭಾಗದ ಸಹಾಯಕ ಆಯುಕ್ತ ಟಿ.ಯೋಗೇಶ ಅವರಿಗೆ ನಗರಸಭಾ ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ಕೆರೆಯ ಹತ್ತಿರ ಹೊಸದಾಗಿ 10 ಬೊರವೆಲ್‌ಗಳನ್ನು ಕೊರೆದು ಪಂಪ್‌ಸೆಟ್ ಅಳವಡಿಸಬೇಕು. ಗುರುಸಿದ್ದಪ್ಪನ ತೋಟದ ಹತ್ತಿರ ಹರಿಯುವ ಹಳ್ಳದ ನೀರನ್ನು ಕೆರೆಗೆ ಸರಬರಾಜು ಮಾಡಲು 10 ಎಚ್.ಪಿ.ಯ ಎರಡು ಪಂಪ್‌ಸೆಟ್ ಅಳವಡಿಸಿ 4 ಕಿ.ಮೀ.ವರೆಗೆ 6 ಇಂಚ್ ವ್ಯಾಸದ ಪಿವಿಸಿ ಪೈಪ್‌ಲೈನ್ ಹಾಕಬೇಕು. ಇಲ್ಲದಿದ್ದರೆ ನಗರದಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ನಗರಸಭಾ ಸದಸ್ಯರಾದ ಜಾಫರ ಜಾಗೀರದಾರ, ಪ್ರಭುರಾಜ, ನಬೀಸಾಬ, ಶರಣಯ್ಯಸ್ವಾಮಿ, ವೆಂಕಟೇಶ ಬಂಡಿ, ಹಾಜಿ ಮಸ್ತಾನ ಮತ್ತಿತರರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement