ಬಾಲಕಾರ್ಮಿಕ ಪುನರ್ವಸತಿ ಶಾಲೆ ಸಾಧನೆ
ರಾಯಚೂರು: ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಅಡಿ ನಿರ್ವಹಿಸುತ್ತಿರುವ ಬಾಲಕಾರ್ಮಿಕ ಪುನರ್ವಸತಿ ಶಾಲೆಯ ಮಕ್ಕಳು ಈಚೇಗೆ ಲಕ್ನೋದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮೆರೆದಿದ್ದಾರೆ.
ಇಲ್ಲಿನ ಸರ್ವೋದಯ ಸಂಸ್ಥೆಯ ವತಿಯಿಂದ ನಿರ್ವಹಿಸುತ್ತಿರುವ ಸಗರನಾಡು ಬಾಲಕಾರ್ಮಿಕ ವಿಶೇಷ ಶಾಲೆ ಯರಮರಸ್ ಕ್ಯಾಂಪಿನ ಮಕ್ಕಳಾದ ಫಾತೀಮಾ, ಅಂಜುಮ್, ಮಹೇಶ್ವರಿ, ಚನ್ನಮಲ್ಲಪ್ಪ, ಜಗದೀಶ್ ಮತ್ತು ಅನ್ಸರ್ ಅವರು ಲಕ್ನೋದಲ್ಲಿ ಮೇ 6ರಿಂದ 12ರವರೆಗೆ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆಂದು ಸಂಸ್ಥೆ ತಿಳಿಸಿದೆ.