ಸಿದ್ದು ಸಿಎಂ: ಹರಕೆ ತೀರಿಸಿದ ಅಯ್ಯಪ್ಪ
ಲಿಂಗಸ್ಗೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಗಲೆಂದು ಹರಕೆ ಹೊತ್ತಿದ್ದ ವ್ಯಕ್ತಿಯೊಬ್ಬ ತನ್ನ ಸಂಕಲ್ಪ ಈಡೇರಿದ ಪ್ರಯುಕ್ತ ಶುಕ್ರವಾರ ದೇವರಿಗೆ ತೆಂಗಿನಕಾಯಿ ಅರ್ಪಿಸಿದರು.
ತಾಲೂಕಿನ ಐದಬಾವಿ ಗ್ರಾಮದ ಅಯ್ಯಪ್ಪ ನಂದಪ್ಪ ಬೆನಕನಾಳ ಅವರು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲೆಂದು ಸುರಪುರ ತಾಲೂಕಿನ ಹೆಬ್ಬಾಳ ಗ್ರಾಮದ ಪರಮಾನಂದ ದೇವರಿಗೆ ಹರಕೆ ಹೊತ್ತಿದ್ದರು. ಅದರಂತೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೇಮಕಗೊಂಡ ಪ್ರಯುಕ್ತ ಅಯ್ಯಪ್ಪ ಅವರು ಪರಮಾನಂದ ದೇವರಿಗೆ 1111 ತೆಂಗಿನಕಾಯಿ ಅರ್ಪಿಸುವ ಮೂಲಕ ತಮ್ಮ ಹರಕೆ ತೀರಿಸಿದರು.
ಸನ್ಮಾನ: ಅಯ್ಯಪ್ಪ ಅವರು ಹರಕೆ ತೀರಿಸಿದ ಪ್ರಯುಕ್ತ ಕುರುಬ ಸಂಘದ ಜಿಲ್ಲಾ ಕಾರ್ಯದರ್ಶಿ ಮುದುಕಪ್ಪ ವಕೀಲರು ಹಾಗೂ ಮುಖಂಡರಾದ ಕುಪ್ಪಣ್ಣ ಕೊಡ್ಲಿ, ಹನುಮಂತ ಪೂಜಾರಿ, ಅಮರೇಶಗೌಡ, ಚನ್ನಬಸವ, ಜಗದೀಶ, ಮಹಾಂತಯ್ಯ, ದೇವಪ್ಪ ಆನ್ವರಿ ಸನ್ಮಾನಿಸಿದರು.