ಲಕ್ಷ್ಯ- 2013 ಫೆಸ್ಟ್ಗೆ ಚಾಲನೆ
ರಾಯಚೂರು: ಇಲ್ಲಿಗೆ ಸಮೀಪದ ಯರಮರಸ್ ಕ್ಯಾಂಪಿನಲ್ಲಿರುವ ಎಸ್ಸೆಲ್ಲೆನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದಿಂದ ಲಕ್ಷ್ಯ- 2013 ಮ್ಯಾನೇಜ್ಮೆಂಟ್ ಫೆಸ್ಟ್ ಇತ್ತೀಚೆಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಲ್ಪಾ ಮೆಡಿಕೇರ್ ಸಂಸ್ಥೆಯ ಎಂಡಿ ವಿಷ್ಣುಕಾಂತ್ ಬುತುಡ ಮಾತನಾಡಿ, ಸತತ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲು ಸಾಧ್ಯ ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ. ಚೆಟ್ಟಿ, ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ. ಅಮರೇಶ್ ಪಾಟೀಲ್ ಮಾತನಾಡಿದರು. ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.
ಪಿಯುಸಿ; ಸಾಧನೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ರಾಮಾಮೊಹಲ್ಲಾ ನಿವಾಸಿಯಾದ ಕಿರಣ ಹಬೀಬ್ ಗುಲ್ಬರ್ಗದ ಜಾಜಿ ಸಂಸ್ಥೆಯ ಗುರುಕುಲ ಪದವಿ ಪೂರ್ವ ವಿದ್ಯಾಲಯದಲ್ಲಿ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಶೇ.94.16 ಅಂಕ ಗಳಿಸಿ ಕಾಲೇಜಿಗೆ ಹಾಗೂ ಪಾಲಕರಿಗೆ ಕೀರ್ತಿ ತಂದಿದ್ದಾನೆ.