ಗ್ರಾಮೀಣ ಕೃಪಾಂಕ ರಹಿತ ನೌಕರರ ಸಭೆ 24ಕ್ಕೆ
ಗುಲ್ಬರ್ಗ: ನಗರದ ಸಾರ್ವಜನಿಕ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದ ಎರುದುಗಡೆ ಇರುವ ಬಯಲು ರಂಗ ಮಂದಿರದಲ್ಲಿ ಮೇ 24ರಂದು ಬೆಳಗ್ಗೆ 9.30 ಗಂಟೆಗೆ ಗುಲ್ಬರ್ಗ ವಿಭಾಗ ಮಟ್ಟದ ಗ್ರಾಮೀಣ ಕೃಪಾಂಕ ರಹಿತ ನೌಕರರ ಸಭೆ ಕರೆಯಲಾಗಿದೆ. ಗ್ರಾಮೀಣ ಕೃಪಾಂಕ ರಹಿತ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಿರೀಶ ಕಡ್ಲೇವಾಡ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಕರೆಯಲಾಗಿದ್ದು, ಗ್ರಾಮೀಣ ಕೃಪಾಂಕ ರಹಿತ ಸರ್ಕಾರಿ ನೌಕರರಿಗೆ ಪೂರ್ವಾನ್ವಯವಾಗುವಂತೆ ಸೇವಾ ಸೌಲಭ್ಯಗಳನ್ನು ವಿಸ್ತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ತೀರ್ಪು ಬಂದ ಹಿನ್ನೆಲೆಯಲ್ಲಿ ಮುಂದಿನ ರೂಪು ರೇಷೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ವಿವಿಧ ಇಲಾಖೆಗಳ ಗ್ರಾಮೀಣ ಕೃಪಾಂಕ ರಹಿತ ಸರ್ಕಾರಿ ನೌಕರರು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಕಾರ್ಯದರ್ಶಿ ನೀಲಾಸಿಂಗ್ ಹಜಾರಿ. ಹೆಚ್ಚಿನ ಮಾಹಿತಿಗಾಗಿ 9611894415, 8884103398ಗೆ ಸಂಪರ್ಕಿಸಲು ಕೋರಲಾಗಿದೆ.