ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿಜಾಮರ ಕಾಲದ ಭೂ-ದಾಖಲೆಗಳ ಗಣಕೀಕರಣ ಆರಂಭ

Rashmi Kasaragodu
Updated On : 21 May 2013, 12:16 pm

ಕನ್ನಡಪ್ರಭವಾರ್ತೆ, ಲಿಂಗಸ್ಗೂರು ಮೇ 20
ಹೈದ್ರಾಬಾದ್ ನಿಜಾಮರ ಕಾಲದ ಭೂ ದಾಖಲೆಗಳನ್ನು ಗಣಕೀರಣಗೊಳಿಸುವ ಕಾರ್ಯ ಆರಂಭಗೊಂಡಿದೆ. ಇದರಿಂದ ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಶೀಘ್ರದಲ್ಲಿ ಕಂಪ್ಯೂಟರ್ ಮೂಲಕ ಪಡೆಯಬಹುದಾಗಿದೆ.
ನೆಲ, ಜಲದ ಮಾಹಿತಿ: ಸ್ವಾತಂತ್ರ್ಯ ಪೂರ್ವದಲ್ಲಿ ಹೈದ್ರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಲಿಂಗಸ್ಗೂರು ತಾಲೂಕು, ಇಲ್ಲಿನ ಭೂ ದಾಖಲೆಗಳು ಅವರ ಆಡಳಿತ ಭಾಷೆ ಉರ್ದು ಮತ್ತು ಹಿಂದಿಯಲ್ಲಿದ್ದವು. ಉರ್ದುದಲ್ಲಿ 1335 ಫಸಲಿ ಎಂಬ ಇಸ್ವಿಯಲ್ಲಿ ಬಟ್ಟೆಯ ಮೇಲೆ ಭೂಮಿಯ ನಕ್ಷೆ, ವಿಸ್ತೀರ್ಣ, ನೆಲ, ಜಲದ ಬಗ್ಗೆ ಮಾಹಿತಿ ನಮೂದಿಸಲಾಗಿತ್ತು. ಪ್ರಸ್ತುತ 1419 ಫಸಲಿ ವರ್ಷ ಆರಂಭದಲ್ಲಿದೆ. ಅಂದರೆ ಸುಮಾರು 84 ವರ್ಷದ ಹಿಂದಿನ ಭೂ ದಾಖಲೆಗಳೆಲ್ಲವೂ ಬಟ್ಟೆ ಮೇಲೆ ನೋಡಬಹುದಾಗಿತ್ತು.
  ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಸಹಯೋಗದೊಂದಿಗೆ ಟ್ರೇಸಿಂಗ್ ಮ್ಯಾ ಪ್ ಸಿದ್ಧಪಡಿಸಿ ಪ್ರಿಂಟ್ ಹಾಳೆಯ ಮೂಲಕ ನವೀಕರಣ ದಾಖಲೆಗಳನ್ನು ಸಿದ್ಧಪಡಿಸಲಾಯಿತು. ರಾಜ್ಯ ಸರ್ಕಾರ 2009ರಲ್ಲಿ ಎಲ್ಲ ಭೂ ದಾಖಲೆಗಳನ್ನು ಗಣಕೀಕರಣಗೊಲಿಸಲು ಯೋಜನೆ ರೂಪಿಸಿತು.
ಖಾಸಗಿ ಸಂಸ್ಥೆಗೆ ಜವಾಬ್ದಾರಿ: ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಗಣಕೀಕರಣಗೊಳಿಸಲು ಬೆಂಗಳೂರಿನ ಕ್ಯಾಪಿಟಲ್ ಬಿಸಿನೆಸ್ ಸಿಸ್ಟಮ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಗೆ ಜವಾಬ್ದಾರಿ ವಹಿಸಲಾಯಿತು. ಅದರಂತೆ ಲಿಂಗಸ್ಗೂರು ತಾಲೂಕಿನ 192 ಗ್ರಾಮಗಳ ಭೂ ದಾಖಲೆಗಳ ಗಣಕೀಕರಣ ಕಾರ್ಯ ಪೂರ್ಣಗೊಳಿಸಲು ಮುಂದಾಗಿದೆ.
ಭೂ ದಾಖಲೆಗಳ ಸ್ಕ್ಯಾನಿಂಗ್, ಟಿಪ್ಪಣಿ, ಹಿಸ್ಸಾ ಟಿಪ್ಪಣಿ, ಆಕಾರ ಬಂದ್ ಕಾರ್ಯ ಗಣಕೀಕರಣಗೊಳಿಸಲಾಗುತ್ತಿದೆ. ಈಗಾಗಲೇ ಸ್ಕ್ಯಾನಿಂಗ್ ಮಾಡುವ ಕೆಲಸ ಪೂರ್ಣಗೊಳಿಸಲಾಗಿದ್ದು, ಆಕಾರ ಬಂದ್ ಕಾರ್ಯ ಬಾಕಿ ಇರುತ್ತದೆ. ತಾಲೂಕಿನ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ರೈತರು ಪಡೆಯಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತಿತ್ತು. ಇದರಿಂದ ಭೂಮಿ ಅಳತೆ, ಮಾರಾಟ ಮತ್ತು ಖರೀದಿ ಮಾಡಲು ದಾಖಲೆ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿತ್ತು. ಆದರೆ ಇನ್ನು ಮುಂದೆ ಅವಶ್ಯ ಭೂ ದಾಖಲೆಗಳೆಲ್ಲ ಕಂಪ್ಯೂಟರ್ ಮೂಲಕ ತಕ್ಷಣ ಪಡೆಯಲು ಅವಕಾಶ ದೊರೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement