ನೂತನ ರಾಜ್ಯ ಸಚಿವ ಪಾಟೀಲ್ ಆಗಮನ
ಸೇಡಂ: ಸತತ ಮೂರು ಬಾರಿ ಹ್ಯಾಟ್ರಿಕ್ ಬಾರಿಸಿದ ಡಾ. ಶರಣಪ್ರಕಾಶ ಆರ್. ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರಾಗಿ ಪದಗ್ರಹಣ ಹೊಂದಿದ ಬಳಿಕ ಪ್ರಥಮ ಬಾರಿಗೆ ಮೇ 21ರಂದು ಮಧ್ಯಾಹ್ನ 12ಕ್ಕೆ ತವರು ಸೇಡಂಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಿಂದ ಕೊತ್ತಲ ಬಸವೇಶ್ವರ ದೇವಾಲಯದವರೆಗೆ ನೂತನ ರಾಜ್ಯ ಸಚಿವರ ಮೆರವಣಿಗೆಯೊಂದಿಗೆ ಬೃಹತ್ ಸಂಖ್ಯೆಯಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ್, ವೆಂಕಟರೆಡ್ಡಿ ಕಡತಾಲ ತಿಳಿಸಿದ್ದಾರೆ.