ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಯಚೂರು ದಂಪತಿಗೆ ವಿಚಿತ್ರ ಮಗು ಜನನ

Rashmi Kasaragodu
Updated On : 21 May 2013, 12:17 pm

ಆನೇಕಲ್: ಆನೇಕಲ್ ತಾಲೂಕು ಹೊಸರಸ್ತೆ ಚನ್ನಕೇಶವನಗರದಲ್ಲಿ ಒಂದೇ ದೇಹ ಎರಡು ತಲೆ ಇರುವ ವಿಚಿತ್ರ ಮಗು ಜನಿಸಿದೆ. ಮೂಲತಃ ರಾಯಚೂರಿವರಾದ ವೆಂಕಟೇಶ್ ಪತ್ನಿ ಮಾಲಾಶ್ರೀ ಎಂಬಾಕೆ ಏಳು ತಿಂಗಳಿಗೆ (ಹೆರಿಗೆ ಪೂರ್ವ) ಹೆಣ್ಣು ಮಗುವಿಗೆ ಸೋಮವಾರ ಬೆಳಿಗ್ಗೆ ಜನ್ಮ ನೀಡಿದ್ದರು. ಸಂಪೂರ್ಣ ಬೆಳೆದಿದ್ದ ಈ ಮಗುವಿನ ಕಣ್ಣು, ಬಾಯಿ, ಮೂಗು, ಕಿವಿ ಎಲ್ಲಾ ಚೆನ್ನಾಗಿದ್ದು ಕಿವಿ ಹಾಗೂ ಕತ್ತಿನ ಭಾಗಕ್ಕೆ ಹೊಂದಿಕೊಂಡಂತೆ ಮತ್ತೊಂದು ಮುಖ ಇದೆ. ಆ ಮುಖದಲ್ಲಿ ಕಣ್ಣು, ಕಿವಿ, ಮೂಗು, ಹಣೆ ಎಲ್ಲ ಇದ್ದು ಪೂರ್ಣ ಬೆಳವಣಿಗೆಯಾಗಿರಲಿಲ್ಲ.
ಅರ್ಧ ಗಂಟೆಗಳ ಕಾಲ ಈ ಮಗು ಜೀವಿಸಿತ್ತು ಎಂದು ಚನ್ನಕೇಶವ ನಗರ ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮಗು ಹಾಗೂ ತಾಯಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸುವುದಾಗಿ ಅವರು ತಿಳಿಸಿದ್ದಾರೆ.
ಮಾಲಾಶ್ರೀಗೆ ಇದು ಚೊಚ್ಚಲ ಹೆರಿಗೆಯಾಗಿದ್ದು ಉದ್ಯೋಗ ಅರಸಿ ಇವರು ಪತಿಯೊಡನೆ ಹೊಸರಸ್ತೆಯಲ್ಲಿ ನೆಲೆಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement