ವರ್ಷಕ್ಕೆರಡೇ ಸಿನೆಮಾ, ಮದುವೆ ಸದ್ಯಕ್ಕಿಲ್ಲ
ರಾಯಚೂರು: ಇನ್ನು ಮುಂದೆ ವರ್ಷಕ್ಕೆ ಒಂದೆರಡು ಸಿನೆಮಾ ಮಾಡ್ತೀನಿ.., ಮುಂದಿನ ಮೂರ್ನಾಲ್ಕು ವರ್ಷ ಮದುವೆಯ ವಿಚಾರವಿಲ್ಲ. ದಂಡುಪಾಳ್ಯ ತೆಲುಗಿನಲ್ಲಿ ಸೂಪರ್ ಹಿಟ್. ತಮಿಳಿನಲ್ಲಿ ಮೇ 24ಕ್ಕೆ ಬಿಡುಗಡೆಯಾಗಲಿದೆ.
-ಹೀಗೆಂದವರು ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ನಟಿ ಪೂಜಾ ಗಾಂಧಿ.
ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ತಮಗೆ ಬರುವ ಎಲ್ಲ ಸಿನೆಮಾಗಳ ಆಫರ್ ಒಪ್ಪಿಕೊಳ್ಳುವುದಿಲ್ಲ. ವರ್ಷಕ್ಕೆ ಒಂದೆರಡು ಸಿನೆಮಾ ಮಾಡುತ್ತೇನೆ. ಒಳ್ಳೆಯ ಚಿತ್ರಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು. ಈಗಾಗಲೇ ಕನ್ನಡ ಭಾಷೆಯಲ್ಲಿ ದಂಡುಪಾಳ್ಯ ಹಿಟ್ ಆಗಿದ್ದು, ತೆಲುಗಿನಲ್ಲಿಯೂ 100ದಿನದ ಪ್ರದರ್ಶನ ಕಾಣುತ್ತಿದೆ. ಮೇ 24ಕ್ಕೆ ದಂಡುಪಾಳ್ಯದ ತಮಿಳಿನಲ್ಲಿ ಬಿಡುಗಡೆ ಕಾಣಲಿದೆ. ಅಲ್ಲಿಯೂ ಚಿತ್ರ ಹಿಟ್ ಆಗುವ ವಿಶ್ವಾಸವಿದೆ. ಸದ್ಯ ಮದುವೆಯ ವಿಚಾರವಿಲ್ಲ. ತಾವು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗುವ ಮೂಲಕ ಜನಸೇವೆ ಮಾಡುವುದಾಗಿ ಹೇಳಿದರು. ಮುಂದಿನ ಮೂರ್ನಾಲ್ಕು ವರ್ಷಗಳ ನಂತರವೇ ಮದುವೆಯಾಗುವ ಬಗ್ಗೆ ಯೋಚಿಸುವುದಾಗಿಯೂ ನಟಿ ಪೂಜಾಗಾಂಧಿ ಹೇಳಿದರು