ಸಿಂಧನೂರು: 5 ದಿನಕ್ಕೊಮ್ಮೆ ನೀರು ಪೂರೈಕೆ
ಸಿಂಧನೂರು: ನಗರಕ್ಕೆ ಮೇ 20ರಿಂದ ಜಾರಿಯಾಗುವಂತೆ ಕುಡಿಯುವ ನೀರನ್ನು 5 ದಿನಗಳಿಗೊಮ್ಮೆ ಪೂರೈಕೆ ಮಾಡುವುದಾಗಿ ನಗರಸಭೆ ಪೌರಾಯುಕ್ತ ನಾಸೀರ್ ಅಲಿ ತಿಳಿಸಿದ್ದಾರೆ.
ಕೆರೆಗಳಲ್ಲಿ ಸಂಗ್ರಹಿಸಿದ ನೀರು ಜುಲೈ ಅಂತ್ಯದವರೆಗೆ ಮಾತ್ರ ಸರಬರಾಜು ಮಾಡಲು ಅವಕಾಶ ಇರುವುದರಿಂದ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಗರಸಭೆ ನಿರ್ಧರಿಸಿದೆ. ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದಲೂ ನೀರನ್ನು ಕಾಯಿಸಿ, ಆರಿಸಿ ಸೋಸಿ ಕುಡಿಯಬೇಕು. ನೀರು ಪೋಲಾಗದಂತೆ ಮಿತವಾಗಿ ಬಳಸಬೇಕು. 5 ದಿನಕ್ಕೊಮ್ಮೆ ನೀರನ್ನು ಪೂರೈಕೆ ಮಾಡುವುದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.