ವೀರಬ್ರಹ್ಮೇಂದ್ರ ಮಹೋತ್ಸವ
ಸಿಂಧನೂರು: ನಗರದ 40ನೇ ಕಾಲುವೆ ಬಳಿ ಇರುವ ಜಗದ್ಗುರು ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿಗಳವರ 320ನೇ ಆರಾಧನಾ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ಜರುಗಿತು ಎಂದು ಸೇವಾ ಸಮಿತಿಯ ಕಾರ್ಯದರ್ಶಿ ಚಿನ್ಮಯಾಚಾರ್ಯ ತಿಳಿಸಿದ್ದಾರೆ.
ಆರಾಧನಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಸುಪ್ರಭಾತ, ಅಭಿಷೇಕ, ಏಕಾದಶಿ ರುದ್ರಾಭಿಷೇಕ, ನೂತನ ವಸ್ತ್ರಧಾರಣೆ ನಂತರ ಶ್ರೀಗಳಿಗೆ ಆರಾಧನಾ ಪೂಜೆ, ಸಹಸ್ರನಾಮಾರ್ಚನೆ ನಡೆದವು. ಭಕ್ತಾಧಿಗಳಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಪಿ. ಸರ್ವೇಶ್ವರರಾವ್, ಖಜಾಂಚಿ ರಾಮರಾವು , ಕೊಪ್ಪಳ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕೊಲ್ಲಾ ಶೇಷಗಿರಿರಾವ್, ಜಿ. ಚಂದ್ರಶೇಖರ, ಸಿ.ಎಚ್.ರಾಧಾಕೃಷ್ಣ, ವಿಜಯಚಂದ್ರ, ಪಿ.ನರಸಿಂಹಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು. ಪೂಜಾ ಕೈಂಕರ್ಯಗಳನ್ನು ಅರ್ಚಕ ಪಿ. ಶಿವಾಚಾರ್ಯರು ನಡೆಸಿದರು ಎಂದು ತಿಳಿಸಿದ್ದಾರೆ.