ಆಳ್ವಾಸ್ ಚಿತ್ರಕಲಾ ಶಿಬಿರಕ್ಕೆ ಅರ್ಜಿ
ಗುಲ್ಬರ್ಗ: ಚಿಕ್ಕಮಗಳೂರು ಜಿಲ್ಲೆಯ ಮೂಡುಬಿದಿರೆಯಲ್ಲಿ ಡಿಸೆಂಬರ್ನಲ್ಲಿ ಆಳ್ವಾಸ ವಿಶ್ವ ವರ್ಣಸಿರಿ ಎಂಬ ಬೃಹತ್ ಚಿತ್ರಕಲಾ ಶಿಬಿರ ಆಯೋಜಿಸಲಾಗುತ್ತಿದ್ದು, ಈ ಶಿಬಿರಕ್ಕೆ ಭಾಗವಹಿಸಲು ಇಚ್ಛಿಸುವ ಕಲಾವಿದರು ವಿವರಣೆ ನೀಡಲು ಜಿಲ್ಲಾ ಸಂಚಾಲಕ ಡಾ. ಶಾಹೆದ್ ಪಾಷಾ ಮನವಿ ಮಾಡಿದ್ದಾರೆ.ಚಿತ್ರಕಲಾವಿದರು ತಮ್ಮ ಎರಡು ಕಲಾಕೃತಿಗಳ ಛಾಯಾಚಿತ್ರಗಳು ಮತ್ತು ವ್ಯಕ್ತಿಪರಿಚಯದ ಮೂಲಪ್ರತಿ ಜೂನ್ 30ರೊಳಗೆ ಗುಲ್ಬರ್ಗ ಜಿಲ್ಲಾ ಸಂಚಾಲಕ ಡಾ. ಶಾಹೆದ್ ಪಾಶಾ ಅವರಿಗೆ ಸಂಪರ್ಕಿಸಲು (9845418106) ಕೋರಲಾಗಿದೆ.