ಆಸ್ಪತ್ರೆಗೆ ಪ್ರಿಯಾಂಕ್ ಖರ್ಗೆ ಹಠಾತ್ ಭೇಟಿ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಮೇ 22
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶಾಸಕ ಪ್ರಿಯಾಂಕ್ ಖರ್ಗೆ ಮಂಗಳವಾರ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ವ್ಯವಸ್ಥೆ ನೋಡಿ ಅಸಮಧಾನ ವ್ಯಕ್ತಪಡಿಸಿ 15 ದಿನಗಳ ಒಳಗಾಗಿ ಅವ್ಯವಸ್ಥೆ ಸರಿಪಡಿಸಿ ಎಂದು ಅಲ್ಲಿಯ ವೈದ್ಯರಿಗೆ ಸೂಚಿಸಿದರು.
ರೋಗಿಗಳ ಆರೋಗ್ಯ ವಿಚಾರಿಸಿ ರೋಗಿಗಳಿಗೆ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಔಷಧಿಗಳನ್ನು ಪೊರೈಸಲು ಇಲಾಖೆ ಅಧಿಕಾರಿಗಳ ಜತೆಗೆ ಮಾತನಾಡುವುದಾಗಿ ಹೇಳಿದರು. ಖಾಲಿ ಹುದ್ದೆಗಳ ಭರ್ತಿಗಾಗಿ ವೈದ್ಯಕಿಯ ಸಿಬ್ಬಂದಿ ಭರ್ತಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಡಾ. ಪ್ರಭುರಾಜ ಕಾಂತಾ, ಜಿಪಂ ಸದಸ್ಯ ರಮೇಶ ಮರಗೋಳ, ಎಪಿಎಂಸಿ ಅಧ್ಯಕ್ಷ ಶಿವಯೋಗಿ ಸಾಹು, ಶಿವಕುಮಾರ ಸುಲ್ತಾನಪುರ ಇತರರು ಇದ್ದರು.