ಎಸ್ಸೆಸ್ಸೆಲ್ಸಿ: ವಿದ್ಯಾರ್ಥಿ ಅಯ್ಯಪ್ಪ ಸಾಧನೆ
ದೇವದುರ್ಗ: ತಾಲೂಕಿನ ಆಲ್ಕೋಡ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಅಯ್ಯಪ್ಪ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.91.52 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾನೆ. ಶಾಲೆಯ ವಿದ್ಯಾರ್ಥಿ ಅಯ್ಯಪ್ಪ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದು, ಶಾಲೆಯು ಎಸ್ಸೆಸ್ಸೆಲ್ಸಿಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದೆ. 27 ವಿದ್ಯಾರ್ಥಿಗಳಲ್ಲಿ 1 ಡಿಸ್ಟಿಂಕ್ಷನ್, 18 ಪ್ರಥಮ ದರ್ಜೆ, 4 ದ್ವಿತೀಯ ದರ್ಜೆ, 3 ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆಂದು ಶಾಲೆ ತಿಳಿಸಿದೆ.