ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗುರುತಿನ ಚೀಟಿ ಪಡೆಯಲು ಸಲಹೆ

Rashmi Kasaragodu
Updated On : 23 May 2013, 11:54 am

ಗುಲ್ಬರ್ಗ: ಜಿಲ್ಲಾ ಅಂಗವಿಕಲರ ವಿವಿಧೋದ್ದೇಶ ಸರ್ಕಾರೇತರ ಸೇವಾ ಸಂಘಕ್ಕೆ ಹಿರಿಯ ನಾಗರಿಕರ ಗುರುತಿನ ಚೀಟಿ ತಯಾರಿಸಲು ಸರ್ಕಾರ ಪರವಾನಗಿ ನೀಡಿರುತ್ತದೆ ಎಂದು ಜಿಲ್ಲಾ ಅಂಗವಿಕಲರ ವಿವಿಧೋದ್ದೇಶ ಸೇವಾ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತರಾವ ಕುಲ್ಕರ್ಣಿ ತಿಳಿಸಿದ್ದಾರೆ.
ಹಿರಿಯ ನಾಗರಿಕರು ಗುರುತಿನ ಚೀಟಿಗಾಗಿ ಇತ್ತೀಚಿನ 3 ಫೋಟೋ, ಚುನಾವಣಾ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್, ಬ್ಲಡ್ ಗ್ರೂಪ್‌ನೊಂದಿಗೆ ಜಿಲ್ಲಾ ಅಂಗವಿಕಲರ ಸಂಘದ ಕಚೇರಿಗೆ ನೀಡಿ ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.  ಸರ್ಕಾರದಿಂದ ಸಿಗುವ ರಿಯಾಯತಿ ದರದಲ್ಲಿ ಬಸ್‌ಪಾಸ್ ಸೌಲಭ್ಯ, ಉಚಿತ ಕಾನೂನು ಸಲಹೆ ನೆರವು, ನಿರ್ಗತಿಕ ಬಡ ಹಿರಿಯ ನಾಗರಿಕರಿಗೆ 400 ಮಾಸಾಶನ ಭತ್ಯೆ ಸೇರಿದಂತೆ ವಿವಿಧ ಮೂಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ವಿವಿಧೋದ್ದೇಶ ಸರ್ಕಾರೇತರ ಸೇವಾ ಸಂಘ, ಹಿರಿಯ ನಾಗರಿಕರ ಗುರಿತಿನ ಚೀಟಿ ವಿತರಣಾ ಕೇಂದ್ರ, ಲಕ್ಷ್ಮೀ ನಿವಾಸ, ಎಂಐಜಿ 21, 2ನೇ ಕ್ರಾಸ್, ಆದರ್ಶ ನಗರಕ್ಕೆ ಸಂಪರ್ಕಿಸಬಹುದು.
ನಾಳೆ ಕಾಂಗ್ರೆಸ್ ಸಮಿತಿ ಸಭೆ
ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ವಿಭಾಗದ ಕಾಂಗ್ರೆಸ್ ಸಮಿತಿ ಸಭೆಯು ಮೇ 24ರಂದು ಬೆಳಗ್ಗೆ 11ಕ್ಕೆ ನಗರದ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಎದುರುಗಡೆ ಇರುವ ವೀರೇಂದ್ರ ಪಾಟೀಲ್ ಮಂಗಲ ಕಾರ್ಯಾಲಯದಲ್ಲಿ ನಡೆಯಲಿದೆ ಎಂದು ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಒಂಟಿ ತಿಳಿಸಿದ್ದಾರೆ. ಕೈಲಾಸನಾಥ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪಕ್ಷದ ಸಂಘಟನೆ ಬಲಪಡಿಸುವಿಕೆ ಮತ್ತು ತತ್ವ ಸಿದ್ದಾಂತ ಪಾಲಿಸುವ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಸಭೆಯಲ್ಲಿ ಪಕ್ಷದ ದಕ್ಷಿಣ ವಿಭಾಗದ ಗ್ರಾಮೀಣ ಅಧ್ಯಕ್ಷ ನೀಲಕಂಠರಾವ ಮುಲಗೆ, ಜಿಲ್ಲಾ ಹಂಗಾಮಿ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ್, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಮುಖಂಡರಾದ ಬಿ.ಜಿ. ಜವಳಿ, ವೀರಯ್ಯ ಸ್ವಾಮಿ, ಸತೀಶ ಗುತ್ತೇದಾರ, ಇಲಿಯಾಸ್ ಭಾಗವಾನ್, ಮಜರ್ ಹುಸೇನ್ ಆಲಂಖಾನ್ ಇತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜೂ.8ರಿಂದ ಶರಣ  ಸಾಹಿತ್ಯ ಸಮ್ಮೇಳನ
ಗುಲ್ಬರ್ಗ: ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನವನ್ನು ಜೂನ್ 8 ಮತ್ತು 9ರಂದು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ, ಕಾರ್ಯದರ್ಶಿ ಶಿವರಾಜ ಅಂಡಗಿ ತಿಳಿಸಿದ್ದಾರೆ. ಬಸವ ಸಮಿತಿ ಗುಲ್ಬರ್ಗ ಅಧ್ಯಕ್ಷೆ ವಿಲಾಸವತಿ ಖೂಬಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಶಾಸಕ ಅಲ್ಲಮಪ್ರಭು ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ನಗರದ ವಿಶ್ವೇಶ್ವರ ಭವನದಲ್ಲಿ ನಡೆಯುವ ಈ ಸಮ್ಮೇಳನವು ಫೆಬ್ರವರಿಯಲ್ಲಿ ನಡೆಸಲು ಯೋಜಿಸಲಾಗಿತ್ತು. ಚುನಾವಣೆ ನಿಮಿತ್ತ ಈ ಸಮ್ಮೇಳನ ಮುಂದೂಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶೇ. 100 ಫಲಿತಾಂಶ
ಗುಲ್ಬರ್ಗ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಡೆದ ಬಿಇಡಿ ಪರೀಕ್ಷೆಯಲ್ಲಿ ನಗರದ ನೂತನ ವಿದ್ಯಾಲಯ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 100 ರಷ್ಟು ಫಲಿತಾಂಶ ಲಭಿಸಿದೆ. ಒಟ್ಟು 99 ಪ್ರಶಿಕ್ಷಣಾರ್ಥಿಗಳ ಪೈಕಿ 98 ಪ್ರಶಿಕ್ಷಣಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದು, ಒಬ್ಬ ಪ್ರಶಿಕ್ಷಣಾರ್ಥಿಗೆ ಪ್ರಥಮ ಸ್ಥಾನ ಬಂದಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಮುರುಳೀಧರಾವ, ಕಾರ್ಯದರ್ಶಿ ಶಾಮರಾವ ಖಣಗೆ, ಪ್ರಾಚಾರ್ಯ ಕವಿತಾ ಶ್ರೀನಾಥ ಮತ್ತು ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement