ತಂಗಡಗಿ ಸಚಿವ: ಬೆಂಬಲಿಗರ ಹರ್ಷ
ದೇವದುರ್ಗ: ಬೋವಿ ಸಮಾಜದ ನಾಯಕ ಶಿವರಾಜ್ ತಂಗಡಗಿ ಅವರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದ್ದಕ್ಕೆ ಇಲ್ಲಿನ ಬೋವಿ ಸಮಾಜದವರು ಸಂತಸ ವ್ಯಕ್ತಪಡಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕನಕಗಿರಿಯ ಶಾಸಕ ಶಿವರಾಜ್ ತಂಗಡಿಗಿ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಸಮಾಜದ ಬಸವರಾಜ ಮ್ಯಾಕಲ್ ಅರಕೇರಾ, ನಾಗರಾಜ ಆಲ್ಕೋಡ್, ಮೌನೇಶ, ರೆಡ್ಡೆಪ್ಪ ಗೆಜ್ಜೆಭಾವಿ, ಯಲ್ಲಪ್ಪ, ನಾರಾಯಣ, ಬೂದೆಪ್ಪ ಗಬ್ಬೂರು, ಶಿವರಾಜ, ರಂಗನಾಥ ಜಾಲಹಳ್ಳಿ, ರಮೇಶ ಸೇರಿ ಭೋವಿ ಸಮಾಜದ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.
ನಾಯಕಗೆ ಸಚಿವ ಸ್ಥಾನಕ್ಕೆ ಆಗ್ರಹ
ದೇವದುರ್ಗ: ಸ್ಥಳೀಯ ಶಾಸಕ ಎ.ವೆಂಕಟೇಶ ನಾಯಕ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಯುವ ಮುಖಂಡ ಎಂ.ಡಿ. ಹಾಜಿಸಾಬ್ ಮುಲ್ಲಾ ಮಸರಕಲ್ ಒತ್ತಾಯಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ಷೇತ್ರದ ಶಾಸಕರು ಕಾಂಗ್ರೆಸ್ನ ಹಿರಿಯರಾಗಿದ್ದು, ಸರಳ, ಸಜ್ಜನಿಕೆಗೆ ಹೆಸರಾಗಿದ್ದಾರೆ. ಕಾಂಗ್ರೆಸ್ ನಿಷ್ಠಾವಂತ ವ್ಯಕ್ತಿಯಾಗಿರುವ ಎ. ವೆಂಕಟೇಶ ನಾಯಕರಿಗೆ ಸಚಿವ ಸ್ಥಾನ ನೀಡದಿರುವುದರಿಂದ ತಾಲೂಕಿನ ಜನತೆಗೆ ಬೇಸರ ಉಂಟಾಗಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿಯೇ ಹಿಂದುಳಿದ ದೇವದುರ್ಗ ತಾಲೂಕಿನಲ್ಲಿ ಅನೇಕ ಜಲ್ವಂತ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕಾಗಿ ಸಚಿವ ಸ್ಥಾನ ಅಗತ್ಯವಾಗಿದೆ. ಅನುಭವುಳ್ಳ ರಾಜಕಾರಣಿಯಾಗಿರುವ ಶಾಸಕ ಎ. ವೆಂಕಟೇಶ ನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.