'ಬಸವ ಟ್ರಸ್ಟ್ನಿಂದ ಗುಣಮಟ್ಟದ ಶಿಕ್ಷಣ'
ಸಿಂಧನೂರು: ಬಸವ ಚಾರಿಟೇಬಲ್ ಟ್ರಸ್ಟ್ನಿಂದ ನಡೆಯುತ್ತಿರುವ ಎಲ್ಬಿಕೆ ಪಿಯು ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಸಂಸ್ಕಾರಗಳನ್ನು ತಿಳಿಸಿಕೊಡಲಾಗುತ್ತದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಪಂಪಣ್ಣ ಹಳ್ಳಿ ತಿಳಿಸಿದ್ದಾರೆ.ಎಸ್ಎಸ್ಎಲ್ಸಿಯಲ್ಲಿ ಶೇ.60 ಕ್ಕಿಂತ ಅಧಿಕ ಅಂಕ ಪಡೆದ ಬಾಲಕಿಯರಿಗೆ ಉಚಿತ ಪ್ರವೇಶ, ರಿಯಾಯಿತಿ ಶುಲ್ಕ, ಶೇ. 80ಕ್ಕಿಂತ ಅಧಿಕ ಅಂಕ ಪಡೆದ ಬಾಲಕರಿಗೆ ಉಚಿತ ಪ್ರವೇಶ, ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯವಿದೆ. ಸದುಪಯೋಗ ಪಡೆದುಕೊಳ್ಳಲು ಕೋರಿದ್ದಾರೆ.