ಲೋಕಾಯುಕ್ತ ಬಲೆಗೆ ಅಧಿಕಾರಿ
ಚಿತ್ತಾಪುರ: ಇಲ್ಲಿನ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯ ಬಿಆರ್ಪಿ ರವೀಂದ್ರ ಅಡಿವೆರ ಅವರು ಸಿಆರ್ಪಿ ದೇವಯ್ಯ ಗುತ್ತೇದಾರ ಅವರಿಂದ 6 ಸಾವಿರ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ಬಂಧಿಸಿದ್ದಾರೆ. ಕೋಲ್ಲೂರ ಸಿಆರ್ಪಿಯಲ್ಲಿ ಎಸ್ಡಿಎಂಸಿ ಸದಸ್ಯರಿಗೆ ತರಬೇತಿ, ಶಿಕ್ಷಕರ ಸಮಾಲೋಚನೆ ಸಭೆ, ತರಬೇತಿ ಸಾಮಗ್ರಿಗ ಳನ್ನು ಸರಬರಾಜು ಮಾ ಡಿದ ಹಣ ವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಮಾರ್ಚ್ 30 ರಂದು ನೀಡಿರುವ 16,400 ಚೆಕ್ಕನ್ನು ಕೊಡಲು ಬಿಆರ್ಪಿ ರವೀಂದ್ರ ಅಡಿವೇರ 6 ಸಾವಿರ ಬೇಡಿಕೆ ಇಟ್ಟಿದ್ದರು.
ದೇವಯ್ಯ ಗುತ್ತೆದಾರ ಅವರಿಂದ 6 ಸಾವಿರ ಪಡೆಯುತ್ತಿರುವಾಗ ಲೋಕಾಯುಕ್ತ ಎಸ್ಪಿ ಎಸ್ಎಫ್ ಕಂಬಾರ, ಡಿವೈಎಸ್ಪಿ ರವಿ ಪಾಟೀಲ್, ತನಿಖಾಧಿಕಾರಿ ಜೇಮ್ಸ ಮೆನೆಜೆಸ್, ಸಿಬ್ಬಂದಿಯೊಂದಿಗೆ ದಾಳಿ ಮಾಡಿ ರವೀಂದ್ರ ಅಡಿವೇರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.