ವಿಕಾಸ ಮಾಸ ಪತ್ರಿಕೆ ಆರಂಭಕ್ಕೆ ಮನವಿ
ಗುಲ್ಬರ್ಗ: ಹೈದರಾಬಾದ್ ಕರ್ನಾಟಕದ ಶೈಕ್ಷಣಿಕ ಪತ್ರಿಕೆ ಜೀವನ ವಿಕಾಸ ಮಾಸ ಪತ್ರಿಕೆಯನ್ನು ಪುನಾರಂಭಿಸಲು ಶಿಕ್ಷಕ ಹಾಗೂ ಸಾಹಿತಿ ಮಹಾಂತಯ್ಯ ಮಠ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.ಬಹುದಿನಗಳಿಂದ ಪತ್ರಿಕೆಯು ಗ್ರಾಮೀಣ ಶಾಲೆಗಳಿಗೆ ಅಚ್ಚುಮೆಚ್ಚಿನ ಸಂಚಿಕೆಯಾಗಿದ್ದು, ಹಿಂದುಳಿದ ಜಿಲ್ಲೆಗಳಲ್ಲಿ ಹಲವಾರು ಕವಿಗಳು, ಸಾಹಿತಿಗಳು, ಶಿಕ್ಷಕ- ಶಿಕ್ಷಕಿಯರಿಗೆ ಶಿಕ್ಷಣದ ಸವಾಲುಗಳು ಮತ್ತು ಸಮಸ್ಯೆಗಳು, ಪತ್ರಿಕೆಯಲ್ಲಿನ ಕವನಗಳು, ಲೇಖನಗಳು, ಶಿಕ್ಷಣದ ಆದೇಶಗಳು, ಸುತ್ತೋಲೆಗಳು ಪ್ರಕಟಗೊಳ್ಳುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿತ್ತು ಎಂದು ತಿಳಿಸಿದ್ದಾರೆ.ತಿಂಗಳ- ತಿರುಳು ಸೇರಿದಂತೆ ವಿವಿಧ ಬಗೆಯ ಮಾಹಿತಿ ಒದಗಿಸಲು ಜೀವನ ವಿಕಾಸ ಪತ್ರಿಕೆ ಜೂನ್ ತಿಂಗಳ ಶೈಕ್ಷಣಿಕ ಪತ್ರಿಕೆಯಾಗಿ ಹೊರಹೊಮ್ಮಲಿ. ತಿಂಗಳಿಗೊಮ್ಮೆ ಪ್ರಕಟವಾಗದಿದ್ದರೂ ದ್ವೈಮಾಸಿಕ ಪತ್ರಿಕೆಯಾಗಿ ಪ್ರಕಟಿಸಲಿ ಎಂದು ಪ್ರಧಾನ ಸಂಪಾದಕರಿಗೂ ಹಾಗೂ ಸಂಪಾದಕ ಮಂಡಳಿಗೂ ಪತ್ರಿಕೆಯ ಮೂಲಕ ವಿನಂತಿಸಿದ್ದಾರೆ. ಜೂನ್ ತಿಂಗಳ ಮೊದಲ ವಾರದಲ್ಲಿ ತಾಲೂಕು ಬಿಇಒ ಕಾರ್ಯಾಲಯಕ್ಕೆ ತಲುಪಿಸಿ ಸಿಆರ್ಐ ಅವರಿಂದ ಎಲ್ಲ ಗ್ರಾಮೀಣ ಶಾಲೆಗಳಿಗೆ ತಲುಪುವಂತಾಗಲಿ ಎಂದು ಅವರು ಕೋರಿದ್ದಾರೆ.