ವೈದ್ಯಕೀಯ ಕಾರ್ಯಾಗಾರ
ಗುಲ್ಬರ್ಗ: ನಗರದ ಅಶ್ವಿನಿ ಆಸ್ಪತ್ರೆ ಹಾಗೂ ಅಶ್ವನಿ ಆಸ್ಪತ್ರೆ ಸೋಲಾಪುರ ಸಂಯುಕ್ತಾಶ್ರಯದಲ್ಲಿ ಚೇರಮನ್ ಬಿಪ್ಪಿನಭಾಯಿ ಪಟೇಲ್ ಮತ್ತು ಲೋಕಲ್ ಬಾಡಿ ಚೇರಮನ್ ಗಣೇಶ ತಾಪಾಡಿಯ ಮಾರ್ಗದರ್ಶನದಲ್ಲಿ ವೈದ್ಯಕೀಯ ಕಾರ್ಯಾಗಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸರ್ಜಿಕಲ್ ಗ್ಯಾಸ್ಟ್ರೋಎಂಟೆರೋಲಾಜಿಸ್ಟ್ ಡಾ. ವಿನಿತ ವಾಕಡೆ, ನ್ಯೂರೋಸರ್ಜನ್ ಡಾ. ಶಂತನು ಗುಂಜೂಟಿಕರ್, ಜಾಯಂಟರಿಪ್ಲೆಸ್ಮೆಂಟ್ ಮತ್ತು ಆರ್ಥೋಸ್ಕೋಪಿ ಸರ್ಜನ್ ಡಾ. ಆನಂದ ಕರ್ವಾ, ಆಂಕೂಲಾಜಿಸ್ಟ್ ಸರ್ಜನ್ ಡಾ. ಫಯಿಮ್ ಗೂಲಿವಾಲೆ ಮಾತನಾಡಿದರು.ನಗರದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್, ಅಸೋಸಿಯೇಷನ್ ಆಫ್ ಫಿಜಿಶಿಯನ್ಸ್ ಆಫ್ ಇಂಡಿಯಾ, ಆರ್ಥೋಪಿಡಿಕ್ ಅಸೋಷಿಯೇಷನ್ ಆಫ್ ಗುಲ್ಬರ್ಗ, ಸರ್ಜರಿ ಅಸೋಷಿಯೆಷನ್ ಆಫ್ ಗುಲ್ಬರ್ಗ, ಫ್ಯಾಮಿಲಿ ಫಿಜಿಶಿಯೇಷನ್ಸ್ ಆಫ್ ಗುಲ್ಬರ್ಗ ಮತ್ತು ಜನರಲ್ ಪ್ರಾಕ್ಟಿಷನರ್ಸ ಆಫ್ ಗುಲ್ಬರ್ಗ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು.ಅಶ್ವಿನಿ ಆಸ್ಪತ್ರೆ ಗುಲ್ಬರ್ಗ ಬ್ರಾಂಚ್ ಲೋಕಲ್ ಬಾಡಿ ಡೈರೆಕ್ಟರ್ ಡಾ. ಸಂಪತಕುಮಾರ ಲೋಯಾ, ಮೆಡಿಕಲ್ ಸುಪರಿಡೆಂಟ್ ಡಾ. ರಾಜೇಂದ್ರ ಗೂಳಿ, ರೆಸಿಡೆಂಟ್ ಮೆಡಿಕಲ್ ಆಫಿಸರ್, ಡಾ. ಎಂ.ಎಸ್. ಪಾಟೀಲ್ ಮತ್ತು ಆಸ್ಪತ್ರೆಯ ಎಲ್ಲ ಕನ್ಸಲ್ಟೆಂಟ್ ವೈದ್ಯರು ಹಾಜರಿದ್ದರು.