ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'7800 ಕೋಟಿ ವೆಚ್ಚದಲ್ಲಿ ಬಂದರುಅಭಿವೃದ್ಧಿ'

Rashmi Kasaragodu
Updated On : 24 May 2013, 11:57 am

ಗುರುಮಠಕಲ್: ಕರಾವಳಿ ಬಂದರುಗಳನ್ನು 7800 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ ಚಿಂಚನಸೂರ ಹೇಳಿದರು. ಇಂದು ಯಾದಗಿರಿ ಜಿಲ್ಲೆಯ ಸ್ವಕ್ಷೇತ್ರ ಗುರುಮಠಕಲನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬಂದರುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು. ರಾಜ್ಯದಲ್ಲಿ ಕೃಷಿ ರಂಗದ ನಂತರ ಅತಿ ಹೆಚ್ಚು ಜನರಿಗೆ ಅದರಲ್ಲೂ ಪ್ರಮುಖವಾಗಿ ಬಡವರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶ ಒದಗಿಸುವುದು ಜವಳಿ ಉದ್ಯಮವಾಗಿದೆ. ಗಾರ್ಮೆಂಟ್ ಕ್ಷೇತ್ರದಲ್ಲಿ ಬೆಂಗಳೂರು ನಗರವೊಂದರಲ್ಲೇ ಸುಮಾರು 3.90 ಲಕ್ಷ ಜನರಿಗೆ ಹಾಗೂ ರಾಜ್ಯದ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಸುಮಾರು 1.10ಲಕ್ಷ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ. ಇದರ ಮುಖಾಂತರವಾಗಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ವಿವಿಧ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಲೋಚನೆ ನಡೆದಿದ್ದು, ಸುಮಾರು 50ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಗುಲ್ಬರ್ಗದಲ್ಲಿ ಸುಸಜ್ಜಿತ ಜವಳಿ ಪಾರ್ಕ್, ಬಳ್ಳಾರಿಯ ಸಿದ್ಧ ಉಡುಪು ಪಾಕರ್, ಚಿಕ್ಕಬಳ್ಳಾಪುರ ಟೆಕ್ಸ್ಟೈಲ್ ಪಾರ್ಕ್, ಬೆಳಗಾವಿ ಟೆಕ್ಸ್ಟೈಲ್ ಪಾರ್ಕ್ಗಳ ಸ್ಥಾಪನೆಗೆ ಕೇಂದ್ರದ ಅನುಮೋದನೆಯನ್ನು ನಿರೀಕ್ಷಿಸಲಾಗಿದೆ. ಜಿಎಂ ಟೆಕ್ಸ್ಟೈಲ್ ಪಾರ್ಕ್, ತುಮಕೂರು, ಬೈನರಿ ಟೆಕ್ಸ್ಟೈಲ್ ಪಾರ್ಕ್ಗಳ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಇದಲ್ಲದೇ ಅಂತಾರಾಷ್ಟ್ರೀಯ ಮಾದರಿಯಲ್ಲಿ ರು. 1ಸಾವಿರ ಕೋಟಿ ವೆಚ್ಚದಲ್ಲಿ ವಿಶೇಷ ಜವಳಿ ಪಾ ರ್ಕ್ ನಿರ್ಮಿಸಲು ಪ್ರಸ್ತಾನೆಗಾಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement