ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಗುಲ್ಬರ್ಗ: ನಗರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರೈಲು ಹಳಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಉತ್ತರ ಪ್ರದೇಶದ ಅಜುಮಗರ್ ಮನ್ಸಾರಿ ನಿವಾಸಿಯಾಗಿರುವ ಮಹ್ಮದ್ ಆಸೀಫ್ ಅನ್ಸಾರಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಖಾಜಾ ಬಂದೇನವಾಜ್ ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿ ಬುಧವಾರ ಬೆಳಗ್ಗೆ ರೈಲು ನಿಲ್ದಾಣ ಪಿಡಿಎ ಕಾಲೇಜು ಮಧ್ಯದಲ್ಲಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಸಾವಿಗೆ ಯಾರೂ ಕಾರಣವಲ್ಲ. ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸ್ನೇಹಿತರಿಗೆ ತಿಳಿಸಿ ಅವರ ಮೂಲಕ ಶವವನ್ನು ಸ್ವಂತ ಊರಿಗೆ ಕಳುಹಿಸಿಕೊಡುವಂತೆ ಎಂದು ಈತ ಡೆತ್ ನೋಟ್ ಬರೆದಿದ್ದಾನೆ. ಶವದ ಮರಣತೋತ್ತರ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಗಿದೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.