ಬೀದಿ ಅಂಗಡಿಗಳ ತೆರವು ಕಾರ್ಯ
ಕ.ಪ್ರ. ವಾರ್ತೆ ಲಿಂಗಸ್ಗೂರು ಮೇ 23
ಪಟ್ಟಣದ ಬಸ್ ನಿಲ್ದಾಣ, ಪದವಿ ಪೂರ್ವ ಕಾಲೇಜು, ಅಂಚೆ ಕಚೇರಿ ಮಾರ್ಗದ ಮುಖ್ಯರಸ್ತೆ ಮತ್ತು ಬೆಂಗಳೂರು ಬೈಪಾಸ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಬದಿಯಲ್ಲಿ ಅನಧೀಕೃತವಾಗಿ ಹಾಕಲಾಗಿದ್ದ ಡಬ್ಬಾ, ಶೆಡ್ಡುಗಳ ಅಂಗಡಿಗಳನ್ನು ಗುರುವಾರ ತೆರವುಗೊಳಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ ನೇತೃತ್ವದಲ್ಲಿ ಅಧಿಕಾರಿಗಳು ಬೆಳಗ್ಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಸ್ತೆ ಬದಿಗಳಲ್ಲಿ ಅನಧೀಕೃತವಾಗಿ ಡಬ್ಬಾ ಅಂಗಡಿ ಹಾಗೂ ತಾತ್ಕಾಲಿಕ ಶೆಡ್ಡುಗಳನ್ನು ಹಾಕಿ ಅದರಲ್ಲಿ ಹೋಟೆಲ್, ತರಕಾರಿ, ಹಣ್ಣಿನ ಅಂಗಡಿ, ಮಾಂಸದ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.